ಉತ್ತರ ಕನ್ನಡ : ಮದ್ಯಪಾನಪ್ರಿಯರರ ಜೊತೆಗೆ ಹಾಸ್ಟೆಲ್ ವಿದ್ಯಾರ್ಥಿಗಳು ಕೀಟಲೆ ಮಾಡಿ ಕೊಂಡ ನಂತರ ಇಬ್ಬರ ನಡುವೆ ಹೊಡೆದಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೆಟ್ರಿಕ್ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.
ಮದ್ಯಪ್ರಿಯರನ್ನು ಹಾಸ್ಟೆಲ್ ಹುಡುಗುರು ಕಿಚಾಯಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಇದನ್ನೇ ನೆಪಾಗಿಇಟ್ಟುಕೊಂಡು ದಂಡುಕಟ್ಟಿಕೊಂಡು ಮದ್ಯಪ್ರಿಯರು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಹಾಸ್ಟೆಲ್ ನಲ್ಲಿರುವ ವಸ್ತುಗಳನ್ನು ಚೆಲ್ಲಪಿಲ್ಲಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ಘಟನೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಯೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ನಿಲಯ ಪಾಲಕ ನಾಗೇಂದ್ರ ಅವರು ದೂರು ನೀಡಿರುವ ಹಿನ್ನಲೆಯಲ್ಲಿ ಮದ್ಯಪ್ರಿಯರಾದ ರಾಘವೇಂದ್ರ ಹಾಗೂ ನಂದನ್ ಎಂಬುವರನ್ನು ಶಹರ ಪೊಲೀಸರು ಬಂಧಿಸಿದ್ದಾರೆ ಅಂತ ತಿಳಿದು ಬಂದಿದೆ. ಇದಲ್ಲದೇ ಹಾಸ್ಟೆಲ್ ತುಂಬಾ ರಕ್ತ ಕಂಡು ಹರಡಿದ್ದು, ಘಟನೆಯ ಭಿಭಸ್ಸವನ್ನು ತೋರಿಸುತ್ತಿದೆ.