ಹುಬ್ಬಳ್ಳಿ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಂತ ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿತ್ತು. ಹುಬ್ಬಳ್ಳಿಯ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ್ ಪೂಜಾರಿಗೆ ಇದೀಗ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹುಬ್ಬಳ್ಳಿಯ ಗಲಭೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಹುಬ್ಬಳ್ಳಿ ಪೊಲೀಸರು ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದರು. ಈ ಬಂಧನದ ಬಳಿಕ ಜಾಮೀನಿಗಾಗಿ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇಂದು ಶ್ರೀಕಾಂತ್ ಪೂಜಾರಿ ಪರ ವಕೀಲರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದಂತ ಹುಬ್ಬಳ್ಳಿಯ 1ನೇ ಹೆಚ್ಚುವರಿ ನ್ಯಾಯಾಲಯವು, ಅವರಿಗೆ ಜಾಮೀನು ಮಂಜೂರು ಮಾಡಿದೆ.
ಅಂದಹಾಗೇ ಶ್ರೀಕಾಂತ್ ಪೂಜಾರಿ ಹುಬ್ಬಳ್ಳಿಯಲ್ಲಿ 1992ರಲ್ಲಿ ನಡೆದಿದ್ದಂತ ಗಲಭೆ ಕೇಸ್ ನಲ್ಲಿ ಬಂಧಿಸಲ್ಪಟ್ಟಿದ್ದರು. ಅವರ ಬಂಧನ ವಿರೋಧಿಸಿ ಬಿಜೆಪಿ ನಾಯಕರು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಕೂಡ ನಡೆಸಿದ್ದರು.
‘ಸಿಎಂ ಸಿದ್ಧರಾಮಯ್ಯ’ ರಾಜೀನಾಮೆಗೆ ಪ್ರತಿಪಕ್ಷ ನಾಯಕ ‘ಆರ್.ಅಶೋಕ್’ ಒತ್ತಾಯ
‘ಪದಚ್ಯುತಿ ನಿರ್ಧಾರ ಸಿಎಂಗೆ ಮಾತ್ರ…’ : ತಮಿಳುನಾಡು ಸಚಿವ ‘ಸೆಂಥಿಲ್ ಬಾಲಾಜಿ’ಗೆ ‘ಸುಪ್ರೀಂ’ನಿಂದ ಬಿಗ್ ರಿಲೀಫ್