ದೇಹದಲ್ಲಿ ಕಾಣಿಸುವ ಪ್ರಮುಖ ಖಾಯಿಲೆಗಳ ಪೈಕಿ ಕಿಡ್ನಿ ಫೇಲ್ಯೂರ್ ಕೂಡ ಒಂದಾಗಿದೆ. ಇಂದು ವಯಸ್ಸಾದವರಲ್ಲಿ ಮಾತ್ರವಲ್ಲ ಯುವಜನರಲ್ಲೂ ಈ ಸಮಸ್ಯೆ ಕಾಡುತ್ತಿದೆ. ಇದೀಗ ಹೊಸ ಸಂಶೋದನೆಯೊಂದು ಅಚ್ಚರಿ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದು, ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಕಿಡ್ನಿ ಫೇಲ್ಯೂರ್ ಆಗೋದು ಪಕ್ಕಾ ಎನ್ನಲಾಗಿದೆ. ದೇಹದ ಪ್ರಮುಖ ಅಂಗವಾದ ಮೂತ್ರಪಿಂಡವು ತನ್ನ ಕೆಲಸ ಮಾಡಲು ವಿಫಲವಾದರೆ ಜೀವಕ್ಕೆ ಅಪಾಯ. ಇಂದು ಅನೇಕರಲ್ಲಿ ಈ ಸಮಸ್ಯೆ ಕಾಡುತ್ತಿರುವುದು ತುಂಬಾ ವಿಷಾದನೀಯವಾಗಿದೆ.
ಆ ಲಕ್ಷಣಗಳು ಯಾವುವುಯೆಂದರೆ, ಕಿಡ್ನಿ ವಿಫಲವಾದಾಗ ದೇಹವು ಸರಿಯಾಗಿ ಕೆಲಸ ಮಾಡುವುದಿಲ್ಲ, ತುಂಬಾ ದುರ್ಬಲವಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳಬಹುದು. ಇವು ವಿಪರೀತ ತುರಿಕೆ ಉಂಟುಮಾಡುತ್ತವೆ. ಚರ್ಮವು ತುಂಬಾ ಡ್ರೈ ಮತ್ತು ಒರಟಾಗಲು ಪ್ರಾರಂಭಿಸುತ್ತದೆ. ಪದೇ ಪದೇ ಅತಿಯಾಗಿ ಮೂತ್ರ ವಿಸರ್ಜನೆಯಾಗುವುದು ಕೂಡ ಕಿಡ್ನಿ ವೈಫಲ್ಯದ ಸಂಕೇತ. ಜೊತೆಗೆ ಮೂತ್ರ ವಿಸರ್ಜಿಸುವಾಗ ಉರಿ ಇರುತ್ತದೆ. ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಮುಖದಲ್ಲಿ ಕೂಡ ಊತ ಕಂಡುಬರುತ್ತದೆ. ಕಿಡ್ನಿ ಫೇಲ್ ಆಗಿದ್ದರೆ ನಮಗೆ ಹಸಿವಾಗುವುದಿಲ್ಲ. ವಾಂತಿ ಅಥವಾ ವಾಕರಿಕೆ ಬಂದಂತೆ ಅನಿಸುತ್ತದೆಯಾಗಿದೆ.