ನವದೆಹಲಿ : ಕಾಂಗ್ರೆಸ್ ಗುರುವಾರ ಭಾರತ್ ನ್ಯಾಯ್ ಯಾತ್ರೆಯನ್ನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಎಂದು ಮರುನಾಮಕರಣ ಮಾಡಿದೆ. ಕಳೆದ ವರ್ಷ ಭಾರತ್ ಜೋಡೋ ಯಾತ್ರೆಯನ್ನುಮುನ್ನಡೆಸಿದ ನಂತರ ರಾಹುಲ್ ಗಾಂಧಿ ಜನವರಿ 14 ರಿಂದ ದೇಶದ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯನ್ನ ಮುನ್ನಡೆಸಲಿದ್ದಾರೆ.
ರಾಹುಲ್ ಗಾಂಧಿ ಯಾತ್ರೆಯ ಸಮಯದಲ್ಲಿ ಪ್ರಯಾಣಿಸಲಿರುವ ರಾಜ್ಯಗಳಲ್ಲಿ ಅರುಣಾಚಲ ಪ್ರದೇಶವನ್ನು ಹೊಸದಾಗಿ ಸೇರಿಸಲಾಗಿದೆ.
ಈ ಯಾತ್ರೆಯು ಉತ್ತರ ಪ್ರದೇಶದ 20 ಜಿಲ್ಲೆಗಳಲ್ಲಿ 1,074 ಕಿ.ಮೀ ದೂರವನ್ನು 11 ದಿನಗಳ ಕಾಲ ನಡೆಸಲಿದೆ. ಇಡೀ ಯಾತ್ರೆಯು 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ. ಕ್ರಮಿಸಬೇಕಾದ ಒಟ್ಟಾರೆ ದೂರವನ್ನು 6,200 ಕಿ.ಮೀ.ನಿಂದ 6,700 ಕಿ.ಮೀ.ಗೆ ವಿಸ್ತರಿಸಲಾಗಿದೆ.
Congress renames Bharat Nyay Yatra as Bharat Jodo Nyay Yatra @DeccanHerald
— Shemin (@shemin_joy) January 4, 2024