ಮಂಗಳೂರು : ಕರಾವಳಿ ಕೋಸ್ಟ್ಗಾರ್ಡ್ ಹೆಚ್ಚಿನ ಭದ್ರತೆಗಾಗಿ ರಾಡಾರ್ ಆಳವಡಿಕೆ ಮಾಡುವ ಮೂಲಕ ಕಣ್ಗಾವಲು ಇಡಲಾಗುತ್ತದೆ ಎಂದು ಕರ್ನಾಟಕ ಕಮಾಂಡರ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
BREAKING NEWS: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ಭಯಾನಕ ಕೃತ್ಯ; ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗೆ ಬೆಂಕಿ
ಜ.8 ರಂದು ಪಣಂಬೂರಿನಲ್ಲಿ ಆಯೋಜಿಸಿದ್ದ ಭಾರತೀಯ ಕೋಸ್ಟ್ಗಾರ್ಡ್ ಮೀನುಗಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇಶದ ಕರಾವಳಿ ತೀರದ ಭದ್ರತೆ ದೃಷ್ಟಿಯಿಂದ ಉಡುಪಿಯ ಕುಂದಾಪುರ & ಉತ್ತರ ಕನ್ನಡ ಜಿಲ್ಲೆಯ ಬೇಲೇಕೇರಿಯಲ್ಲಿ ರಾಡಾರ್ ಅಳವಡಿಸಲಾಗುವುದು ದೆಸುರತ್ಕಲ್ ಮತ್ತು ಭಟ್ಕಳದ ರಾಡಾರ್ ಕೇಂದ್ರಗಳ ಸಹಾಯದಿಂದ ಕರ್ನಾಟಕದ ಸಂಪೂರ್ಣ 320 ಕಿ.ಮೀ. ಉದ್ದದ ಕರಾವಳಿಯನ್ನು ಕಣ್ಗಾವಲು ಮಾಡಲಾಗುತ್ತದೆ.
BREAKING NEWS: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ಭಯಾನಕ ಕೃತ್ಯ; ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗೆ ಬೆಂಕಿ
ಬೇಲೇಕೇರಿಯಲ್ಲಿ ರಾಡಾರ್ ಕೇಂದ್ರ ಬಹುತೇಕ ಸಿದ್ಧವಾಗಿದ್ದು, ಕುಂದಾಪುರ ಸುತ್ತಮುತ್ತ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಪ್ರತೀ ರಾಡಾರ್ ಕೇಂದ್ರವು ಸಮುದ್ರದೊಳಗೆ 30 ನಾಟಿಕಲ್ ಮೈಲುಗಳವರೆಗೆ ಕ್ರಮಿಸುತ್ತದೆ.
BREAKING NEWS: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ಭಯಾನಕ ಕೃತ್ಯ; ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗೆ ಬೆಂಕಿ
ರಾಡಾರ್ನಲ್ಲಿರುವ ಕ್ಯಾಮೆರಾ ಐದರಿಂದ ಏಳು ನಾಟಿಕಲ್ ಮೈಲುಗಳನ್ನು ಕ್ರಮಿಸುತ್ತದೆ. ಮುಂಬಯಿ ಭಯೋತ್ಪಾದನ ದಾಳಿಯ ಅನಂತರ ಕರಾವಳಿ ಕಣ್ಗಾವಲು ಜಾಲದ ಅಡಿಯಲ್ಲಿ ರಾಡಾರ್ ಕೇಂದ್ರಗಳನ್ನು ಸ್ಥಾಪಿಸಲಾಯಿತು ಎಂದು ಕರ್ನಾಟಕ ಕಮಾಂಡರ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
BREAKING NEWS: ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ಭಯಾನಕ ಕೃತ್ಯ; ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಗೆ ಬೆಂಕಿ