ಮಂಡ್ಯ: ಜಿಲ್ಲೆಯಲ್ಲಿ ಮತದಾರ ಉಡುಗೋರೆಗಳಿಗೆ ಕಟ್ಟು ಬಿದ್ದು, ಯಾರಿಗೆ ಮತ ಹಾಕಬೇಕು ಎಂಬ ಗೊಂದಲಕ್ಕೆ ಬಿದ್ದಂತಿದೆ. ಆಫರ್ ಮೇಲೆ ಆಫರ್ ಕೊಟ್ಟಿರೋ ಅಭ್ಯರ್ಥಿಗಳಿಗೆಲ್ಲರಿಗೂ ವೋಟ್ ಹಾಕೋದಾಗಿ ಹೇಳಿರುವಂತ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು.. ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದಲ್ಲಿ ಸಾಮಾನ್ಯ ಮತದಾರ ಗೊಂದಲಕೀಡಾಗುವಂತೆ ಆಗಿದೆ. ಉಚಿತ ಉಡುಗೊರೆಗೆ ಕಟ್ಟು ಬಿದ್ದು ಮತದಾರ ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ.
ಕ್ಷೇತ್ರದ ಅಭ್ಯರ್ಥಿಗಳ ಋಣದಲ್ಲಿ ಮತದಾರ ಯಾರಿಗೆ ವೋಟ್ ಹಾಕಬೇಕು ಎಂಬುದೇ ತಿಳಿಯುತ್ತಿಲ್ಲ ಎಂದಿದ್ದಾನೆ. ವೈರಲ್ ಆಗಿರೋ ವೀಡಿಯೋದಲ್ಲಿ ಧರ್ಮಸ್ಥಳ ಯಾತ್ರೆ, ಮಹದೇಶ್ವರ ಬೆಟ್ಟದ ಯಾತ್ರೆ, ಕಂಬಳಿ ಸೇರಿದಂತೆ ಹಲವು ಗಿಫ್ಟ್ ಕೊಟ್ಟಿರೋ ಬಗ್ಗೆ ಪ್ರಸ್ತಾಪಿಸಲಾಗಿದೆ. ಹೀಗಾಗಿ ಒಬ್ಬೊಬ್ಬ ಅಭ್ಯರ್ಥಿಗಳ ಋಣ ತೀರಿಸೋದಕ್ಕೆ ಎಲ್ಲರಿಗೂ ವೋಟ್ ಹಾಕುವಂತ ಕಾಲ ಬರಲಪ್ಪ ಎಂಬುದಾಗಿಯೂ ಕೋರಿದ್ದಾನೆ.
ಮತದಾರನ ಮನಸ್ಥಿತಿಯ ವೀಡಿಯೋ ವೈರಲ್ ಆಗುತ್ತಿದ್ದಂತೇ, ಈಗ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರ ಪ್ರಭುಗಳು ಯಾರಿಗೆ ವೋಟ್ ಹಾಕಲಿದ್ದಾರೋ ಎಂಬ ಆಂತಕವನ್ನು ಹುಟ್ಟುಹಾಕುವಂತೆ ಆಗಿದೆ.
ಹಾಗಾದ್ರೇ ವೈರಲ್ ಆಗಿರೋ ವೀಡಿಯೋದಲ್ಲಿ ಏನ್ ಮಾತನಾಡಿದ್ದಾರೆ ಅಂತ ಈ ಕೆಳಗಿನ ವೀಡಿಯೋ ನೋಡಿ.
'ಗೊಂದಲಕೀಡಾದ ಮದ್ದೂರು ಕ್ಷೇತ್ರದ ಸಮಾನ್ಯ ಮತದಾರ': ಮತದಾರನ ಮನಸ್ಥಿತಿ ಮಾತಿನ ವಿಡಿಯೋ ವೈರಲ್#Congress #BJP #JDS #KarnatakaPolitics #KannadaNews #LatestNews #MandyaPolitics #viralvideo pic.twitter.com/0kysiYgSGe
— Vasantha B Eshwaragere (@vasanthabeshwar) January 8, 2023