ಮಧ್ಯಪ್ರದೇಶ : ಶಿವಪುರಿ ಪ್ರದೇಶದಲ್ಲಿಅಂಗಡಿಯೊಂದರ ಬೀಗ ಮುಗಿದು ದರೋಡೆ ನಡೆಸಿ, ಗುಟ್ಕಾ ತಿನ್ನುತ್ತ ಡ್ಯಾನ್ಸ್ ಮಾಡಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೊ ವೀಕ್ಷಿಸಿ:
ON CAMERA: #Thief 'dances' after stealing cash and goods in #MadhyaPradesh, CCTV video goes viral#India #IndiaNews #MadhyaPradeshNews #Dancing #ViralVideo #CCTVFootage pic.twitter.com/l3ZZCNfCaA
— Free Press Journal (@fpjindia) January 6, 2023
ಮಧ್ಯಪ್ರದೇಶ ಶಿವಪುರಿ ಪ್ರದೇಶದಲ್ಲಿ ಅಂಗಡಿಯಲ್ಲಿ ನಗದು ಮತ್ತು ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ. ಬಳಿಕ ಆತ ಕೈಗೆ ಗುಟ್ಕಾ ಹಾಕಿ ತಿನ್ನುತ್ತಾನೆ , ಕಳ್ಳತನ ಮಾಡಿದ ಕುಷಿಗೆ ಕುಣಿದಿರುವುದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಸಂಬಂಧ ಅಂಗಡಿ ಮಾಲೀಕ ಸೋಮಿ ಜೈನ್ ಅವರು ಜನವರಿ 5ರ ಗುರುವಾರದಂದು ಸಿಸಿಟಿವಿಯ ದೃಶ್ಯ ಆಧಾರದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೀಗವನ್ನು ಮುರಿಯುವ ಮೂಲಕ ಅಂಗಡಿಯನ್ನು ಪ್ರವೇಶಿಸಿದ್ದಾರೆ ಮತ್ತು ಸುಮಾರು ಮೂರು ಗಂಟೆಗಳ ಕಾಲ ಅಲ್ಲಿಯೇ ಇದ್ದನು ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ.
ಅಂಗಡಿ ಮಾಲೀಕರ ದೂರಿನ ನಂತರ, ಪೊಲೀಸರು ಕಳ್ಳನನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನುಮುಂದುವರಿಸಿದ್ದು, ಖೈಯಾಧಾನ ಗ್ರಾಮದ ನಿವಾಸಿ ಗೋಲು ಯಾದವ್ ಕಳ್ಳನನ್ನು ಬಂಧಿಸಲಾಗಿದೆ