ಬೆಂಗಳೂರು: ಮುಂಬರುವಂತ ಕರ್ನಾಟಕ ವಿಧಾನಸಭಾ ಚುನಾವಣೆ-2023ರಕ್ಕೆ ( Karnataka Assembly Election 2023 ) ಕಾಂಗ್ರೆಸ್ ಪಕ್ಷ ( Congress Party ) ಭರ್ಜರಿ ತಯಾರಿ ನಡೆಸಿದೆ. 28 ಲೋಕಸಭಾ ಕ್ಷೇತ್ರಗಳಿಗೆ 28 ಚುನಾವಣಾ ವೀಕ್ಷಕರನ್ನು ( Election Observer ) ನೇಮಕ ಮಾಡಲಾಗಿದೆ.
ಈ ಸಂಬಂಧ ಎಐಸಿಸಿಯ ಜನರಲ್ ಸೆಕ್ರೇಟರಿ ಕೆಸಿ ವೇಣುಗೋಪಾಲ್ ಮಾಹಿತಿ ಬಿಡುಗಡೆ ಮಾಡಿದ್ದು, ಮುಂಬರುವಂತೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಚುನಾವಣೆ ವೀಕ್ಷಕರಾಗಿ 28 ಮಂದಿಯನ್ನು ಲೋಕಸಭಾ ಕ್ಷೇತ್ರಗಳಿಗೆ ( Loka Sabha ) ನೇಮಿಸಲಾಗಿರೋದಾಗಿ ತಿಳಿಸಿದ್ದಾರೆ.
ಅಂದಹಾಗೇ ಬಾಗಲಕೋಟೆಗೆ ಕ್ರಿಸ್ಟೋಫರ್ ತಿಲಕ್, ಬೆಂಗಳೂರು ಸೆಂಟ್ರಲ್ ಗೆ ಟಿ ರಾಧಾಕೃಷ್ಣನ್, ಚಿತ್ರದುರ್ಗಕ್ಕೆ ಸಂಜಯ್ ದತ್, ಕೋಲಾರಕ್ಕೆ ಹೆಚ್ ವೇಣುಗೋಪಾಲ ರಾವ್ ಸೇರಿದಂತೆ 28 ಲೋಕಸಭಾ ಕ್ಷೇತ್ರಗಳಿಗೆ 28 ವೀಕ್ಷಕರನ್ನು ನೇಮಿಸಿ ಎಐಸಿಸಿ ಆದೇಶಿಸಿದೆ.
ಐಟಿ ಕಚೇರಿ ಮುಂದೆ ಪ್ರತಿಭಟಿಸಿದ್ದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್: ಸಿದ್ಧರಾಮಯ್ಯ, ಡಿಕೆಶಿ ಸೇರಿ ಹಲವರಿಗೆ ಸಮನ್ಸ್ ಜಾರಿ
ಬೆಂಗಳೂರು: ಕೊರೋನಾ ಮಾರ್ಗಸೂಚಿ ನಿಯಮ ಉಲ್ಲಂಘಿಸಿ ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದಂತ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ನಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಈ ಮೂಲಕ ವಿಪಕ್ಷ ನಾಯಕ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರಿಗೆ ಬಿಗ್ ಶಾಕ್ ನೀಡಲಾಗಿದೆ.
ಬೆಂಗಳೂರಿನ ಐಟಿ ಕಚೇರಿಯ ಮುಂದೆ ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ದಾಳಿ ಖಂಡಿಸಿ, ಕೋವಿಡ್ ಸಮಯದಲ್ಲಿ ಕೈ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದರು. ಕೊರೋನಾ ಮಾರ್ಗಸೂಚಿ ನಿಯಮವಿದ್ದರೂ, ಇದನ್ನು ಗಾಳಿಗೆ ತೂರಿ ಪ್ರತಿಭಟನೆ ನಡೆಸಿದ್ದಂತ ಕೈ ನಾಯಕರಿಗೆ, ಈಗ ಕೋರ್ಟ್ ಸಮನ್ಸ್ ಜಾರಿಗೊಳಿಸಿ ಬಿಗ್ ಶಾಕ್ ನೀಡಿದೆ.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದಂತ ಕಾಂಗ್ರೆಸ್ ನ ಹಿರಿಯ 13 ನಾಯಕರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಡಾ.ಜಿ ಪರಮೇಶ್ವರ್, ಯುಟಿ ಖಾದರ್, ವೀರಪ್ಪ ಮೊಯ್ಲಿ, ಕೆಜೆ ಜಾರ್ಜ್, ರಿಜ್ವಾನ್ ಅರ್ಷದ್, ಟಿ.ಬಿ ಜಯಚಂದ್ರ, ಎಂ ನಾರಾಯಣ ಸ್ವಾಮಿ, ಪರಮೇಶ್ವರ್ ನಾಯಕ್, ಸಲೀಂ ಅಹ್ಮದ್, ಶಾಸಕಿ ಸೌಮ್ಯ ರೆಡ್ಡಿ, ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಮಹಮ್ಮದ ನಲಪಾಡ್ ಸೇರಿದಂತೆ 13 ಮಂದಿಗೆ ಸಮನ್ಸ್ ಜಾರಿಗೊಳಿಸಿದೆ. ಸೋಮವಾರ ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ.
ರೈತರೇ ಗಮನಿಸಿ: ಕೃಷಿ ವಿಕಾಸ ಯೋಜನೆಯಡಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ