ಬೆಂಗಳೂರು: ವಿವಿಧ ಗಣ್ಯರೊಂದಿಗೆ ಸರ್ಕಾರಿ ಗೃಹದಲ್ಲಿ ಡೀಲ್ ಮಾಡಿದಂತ ವಿಷಯವನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪೋಟಕ ಬಾಂಬ್ ಸಿಡಿಸಿದ್ದರು. ಸ್ಯಾಂಡ್ರೋ ರವಿ ಸರ್ಕಾರಿ ಗೃಹ ಕಚೇರಿಯನ್ನು ತನ್ನ ಅಡ್ಡೆಯನ್ನಾಗಿ ಮಾಡಿಕೊಂಡ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಸ್ಯಾಂಟ್ರೋ ರವಿಗೆ ರೂಮ್ ಕೊಡುತ್ತಿದ್ದಂತ ಕುಮಾರಕೃಪಾ ಅತಿಥಿ ಗೃಹದ ಸೀನಿಯರ್ ಮ್ಯಾನೇಜರ್ ವರ್ಗಾವಣಎ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಹೌದು ಸ್ಯಾಂಟ್ರೋ ರವಿಗೆ ರೂಮ್ ಕೊಡ್ತಿದ್ದ ಅಧಿಕಾರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಗೇಟ್ ಪಾಸ್ ನೀಡಿದೆ. ಕುಮಾರಕೃಪಾ ಗೆಸ್ಟ್ ಹೌಸ್ ನ ಸೀನಿಯರ್ ಮ್ಯಾನೇಜರ್ ಹೆಚ್ ಎಸ್ ದೇವರಾಜ್ ಅವರನ್ನು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿ, ಆದೇಶಿಸಿದೆ.
ಅಂದಹಾಗೇ ಹೊಸ ಕುಮಾರಕೃಪಾ ಅತಿಥಿ ಗೃಹದ ಸೀನಿಯರ್ ಮ್ಯಾನೇಜರ್ ಆಗಿದ್ದಂತ ಹೆಚ್ ಎಸ್ ದೇವರಾಜ್ ಅವರು, ಸ್ಯಾಂಟ್ರೋ ರವಿಗೆ ಡೀಲ್ ಕುದುರಿಸೋದಕ್ಕಾಗಿ ಸರ್ಕಾರಿ ಗೆಸ್ಟ್ ಹೌಸ್ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಇದಷ್ಟೇ ಅಲ್ಲದೇ ಸರ್ಕಾರಿ ಅಥಿತಿ ಗೃಹದಲ್ಲಿ ಸ್ಯಾಂಟ್ರೋ ರವಿ ಹಣ ಹರಡಿಕೊಂಡು ರಾಜಾರೋಷವಾಗಿ ಕುಳಿತುಕೊಂಡಿದ್ದಂತ ಪೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಕುಮಾರಕೃಪಾ ಅತಿಥಿ ಗೃಹದ ಸೀನಿಯರ್ ಮ್ಯಾನೇಜರ್ ಹೆಚ್ ಎಸ್ ದೇವರಾಜ್ ಅನ್ನು ಕಿಕ್ ಔಟ್ ಮಾಡಲಾಗಿದೆ.
BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಮಂಡ್ಯಯ ಶಿಕ್ಷಕ ಹೃದಯಾಘಾತದಿಂದ ಸಾವು
ಖಾದಿ ಪ್ರಿಯರೇ ಗಮನಿಸಿ: ಜ.26ರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಖಾದಿ ಉತ್ಸವ