ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಒಂದೇ ಗ್ರಾಮದ ಒಂದೇ ಸ್ಥಳದಲ್ಲಿ ಮೂರು ಚಿರತೆಗಳು ಸೆರೆಯಾಗಿವೆ. ಮೂರು ಚಿರತೆ ಸೆರೆಯಾಗಿದ್ದರಿಂದ ಗ್ರಾಮಸ್ಥರು ನಿಟ್ಟುಸಿರಿನ ಜೊತೆಗೆ, ಅಚ್ಚರಿಯನ್ನು ಪಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಒಂದೇ ತಿಂಗಳಿನಲ್ಲಿ ಒಂದೇ ಸ್ಥಳದಲ್ಲಿ ಮೂರು ಚಿರತೆಗಳು ಬೋನಿಗೆ ಬಿದ್ದಿದ್ದಾವೆ. ಚಿಕ್ಕಕೊಪ್ಪಲು ಗ್ರಾಮದ ಬಳಿಯಲ್ಲಿ ಚಿರತೆಗಳು ಓಡಾಡುತ್ತಿರೋದನ್ನು ಕಂಡಿದ್ದಂತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯ ಮೇರೆಗೆ ಗ್ರಾಮದ ಬಳಿಯ ಶಿವರಾಮ್ ಎಂಬ ರೈತರ ತೋಯದಲ್ಲಿ ಚಿರತೆ ಸೆರೆಗಾಗಿ ಬೋನನ್ನು ಇರಿಸಲಾಗಿತ್ತು.
ಕಳೆದ ಡಿಸೆಂಬರ್ 12ರಂದು ಒಂದು ಚಿರತೆ ನಾಯಿಯನ್ನು ತಿನ್ನೋದಕ್ಕೆ ಬಂದು ಬೋನಿಗೆ ಬಿದ್ದಿತ್ತು. ಈ ಬಳಿಕ ಡಿಸೆಂಬರ್ 27ರಂದು ಅಲ್ಲಿಯೇ ಇದ್ದಂತ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ. ಇದು ಬೆಳಗಿನ ಜಾವ ಮತ್ತೊಂದು ಚಿರತೆ ಸೆರೆಯಾಗಿರೋದು ಅಚ್ಚರಿಯನ್ನು ಉಂಟು ಮಾಡಿದೆ.
ಇನ್ನೂ ಸೆರೆ ಸಿಕ್ಕ ಚಿರತೆಯನ್ನು ಮಹದೇಶ್ವರ ಬೆಟ್ಟದ ಕಾಡಿಗೆ ಬಿಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಈಗ ಚಿಕ್ಕಕೊಪ್ಪಲು ಗ್ರಾಮದಲ್ಲಿ ಮೂರು ಚಿರತೆ ಸೆರೆ ಸಿಕ್ಕ ಹಿನ್ನಲೆಯಲ್ಲಿ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಅಲ್ಲದೇ ಗ್ರಾಮಸ್ಥರ ಮನವಿಯ ಮೇರೆಗೆ ಮತ್ತೆ ಬೋನ್ ಅದೇ ಸ್ಥಳದಲ್ಲಿ ಇಟ್ಟಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
ನೀವು ಪೂಜಾರಿಯೇ? ರಾಮ ಮಂದಿರ ಉದ್ಘಾಟನೆ ದಿನಾಂಕ ಘೋಷಣೆಗೆ ಅಮಿತ್ಶಾಗೆ ಖರ್ಗೆ ತರಾಟೆ
BREAKING NEWS: ಬೆಂಗಳೂರಿನಲ್ಲಿ ಸಿಎಂ ಉದ್ಘಾಟಿಸಿ 1 ತಿಂಗಳಲ್ಲೇ ದೇಶದ ಪ್ರಥಮ ರ್ಯಾಪಿಡ್ ರಸ್ತೆಯಲ್ಲಿ ಬಿರುಕು