ಧಾರವಾಡ: ಕಳಸಾ ಬಂಡೂರಿಗೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಜನರಿಗೆ ಸಿಹಿ ಸುದ್ದಿ ಕೊಡಲಿದ್ದಾರೆ. ಇನ್ನೂ 60 ದಿನಗಳಲ್ಲಿ ಒಂದು ಒಳ್ಳೆ ಸಿಹಿ ಸುದ್ದಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರಿಯಿಸಿ, ಕಳಸಾ ಬಂಡೂರಿಗೆ ಕಾಂಗ್ರೆಸ್ ವಿರೋಧ ಮಾಡುತ್ತಲೇ ಬಂದಿದೆ. ಈ ಹಿಂದೆ ಕಳಸಾ ಬಂಡೂರಿಗೆ ಒಂದು ಹನಿ ನೀರು ಬಿಡಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಬಗ್ಗೆ ಮಾತನಾಡುವಂತದ್ದು ಹಾಗೂ ಸಮಾವೇಶ ಮಾಡುವಂತ ನೈತಿಕತೆ ಕಾಂಗ್ರೆಸ್ನವರಿಗೆ ಇಲ್ಲ ಎಂದು ಹೇಳಿದ್ದಾರೆ.
BIGG NEWS: ಬಿಎಂಟಿಸಿ ಬಸ್ ಸಂಚಾರ ಚಿಕ್ಕಬಳ್ಳಾಪುರಕ್ಕೂ ವಿಸ್ತರಣೆ; ಎಚ್ಚೆತ್ತ ಕೆಎಸ್ ಆರ್ ಟಿಸಿ ಆಕ್ಷೇಪ
ಟ್ರಿಬ್ಯುನಲ್ ಸರಿ ಪಡಿಸುವ ಕೆಲಸ ಅವರಿಂದ ಯಾವತ್ತೂ ಆಗಿಲ್ಲ. ರೈತರ ಮೇಲೆ ಗೋಲಿಬಾರ್ ಹಾಗೂ ಲಾಠಿ ಚಾರ್ಜ್ ಮಾಡಿದ್ದು ಕಾಂಗ್ರೆಸ್, ನಾನು ಅದೇ ಭಾಗದಲ್ಲಿ ಹುಟ್ಟಿದ್ದೇನೆ. ನಾವು ಹೋರಾಟದಿಂದ ನೀರು ಪಡೆಯುವಂತಹ ಪರಿಸ್ಥಿತಿ ಬಂದಿದೆ. ನಮ್ಮ ಭಾಗದ ಅನೇಕ ರೈತರಿಗೆ ಚಿತ್ರದುರ್ಗ ಹಾಗೂ ಬಳ್ಳಾರಿ ಜೈಲಿಗೆ ಹಾಕುವಂತೆ ಆಯಿತು, ಹೀಗಾಗಿ ಕಾಂಗ್ರೆಸ್ಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.