ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ದಿನಾಂಕವನ್ನು ಘೋಷಿಸಿದ್ದಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಇದೇ ವೇಳೇ ಅವರು ಮತ್ತು ಗೃಹ ಸಚಿವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಹರ್ಯಾಣದ ಪಾಣಿಪತ್ನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಯಾತ್ರೆ ತಲುಪಿದ್ದು, ಅಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಅಮಿತ್ ಶಾ ಅವರು ದೇಶದ ಭದ್ರತೆಯನ್ನು ಖಾತ್ರಿಪಡಿಸುವ ಬದಲು ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೇ ಅವರು ಮಾತನಾಡುತ್ತ “ತ್ರಿಪುರಾದಲ್ಲಿ ಚುನಾವಣೆ ಇದೆ. ಅಮಿತ್ ಶಾ ಅಲ್ಲಿಗೆ ಹೋಗಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ ಮತ್ತು ಅದರ ಉದ್ಘಾಟನೆ ಜನವರಿ 1, 2024 ರಂದು ನಡೆಯುತ್ತಿದೆ ಎಂದು ಹೇಳುತ್ತಾರೆ. ಪ್ರತಿಯೊಬ್ಬರಿಗೂ ದೇವರ ಮೇಲೆ ನಂಬಿಕೆ ಇದೆ, ಆದರೆ ನೀವು ಅದನ್ನು ಚುನಾವಣಾ ಸಮಯದಲ್ಲಿ ಏಕೆ ಘೋಷಿಸುತ್ತಿದ್ದೀರಿ? ಅಂಥ ಪ್ರಶ್ನೆ ಮಾಡಿದರು.
भाजपा का चरित्र — “मुख में राम…बगल में छुरी”
जाने कैसे pic.twitter.com/DcpdNTC2eK
— Mallikarjun Kharge (@kharge) January 6, 2023