ಬೆಂಗಳೂರು: ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವಂತ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಒಂದು ದಿನದ ವೇತನವನ್ನು ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಮುದಾಯ ಭವನವನ್ನು ನಿರ್ಮಿಸುವ ಉದ್ದೇಶಕ್ಕಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಸ್ಯ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು 2023ರ ಜನವರಿ ತಿಂಗಳ ವೇತನದಲ್ಲಿ ಕಟಾಯಿಸಲು ಹಾಗೂ ಕಟಾಯಿಸಲಾದ ಒಟ್ಟಾರೆ ಕ್ರೂಢೀಕೃತ ಮೊತ್ತವನ್ನು ಹಾವೇರಿ ಜಿಲ್ಲಾಧಿಕಾರಿಗಳಿಗೆ ಸಂದಾಯ ಮಾಡಲು ಸೂಚಿಸಿದ್ದಾರೆ.
ಇನ್ನೂ ಜನವರಿ 2023ರ ತಿಂಗಳ ವೇತನದಲ್ಲಿ ಒಂದು ದಿನದ ವೇತನವನ್ನು ವಂತಿಗೆಯಾಗಿ ಕೊಡಲಿಚ್ಚಿಸದ ನೌಕರರು ತಮ್ಮ ಅಸಮ್ಮತಿಯನ್ನು ಸಂಬಂಧಪಟ್ಟ ಬಟವಾಡೆ ಅಧಿಕಾರಿಗಳಿಗೆ ಜನವರಿ 20, 2023ರೊಳಗೆ ಲಿಖಿತ ಮೂಲಕ ಸಲ್ಲಿಸಬೇಕು. ಅಂತಹ ನೌಕರರ ಒಂದು ದಿನದ ವೇತನವನ್ನು ಜನವರಿ ತಿಂಗಳ ವೇತನ ಬಿಲ್ಲಿನಲ್ಲಿ ಕಟಾವು ಮಾಡುವಂತಿಲ್ಲ ಎಂದಿದೆ.
BIGG NEWS: ‘ಖಾಸಗಿ ಶಾಲೆ’ಗಳಿಗೆ ‘ಶುಲ್ಕ ನಿಗದಿ’ಯ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ – ಹೈಕೋರ್ಟ್
‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: KPSCಯಿಂದ ‘ದ್ವಿತೀಯ ಅಧಿವೇಶನ ಇಲಾಖಾ ಪರೀಕ್ಷೆ’ಗೆ ಅರ್ಜಿ ಆಹ್ವಾನ
BREAKING NEWS: ಕಾಂಗ್ರೆಸ್ ಪಕ್ಷದಿಂದ ಯೂಸುಫ್ ಶರೀಫ್ ಆಲಿಯಾಸ್ ಕೆಜಿಎಫ್ ಬಾಬು ಅಮಾನತು | KGF Babu Suspended