ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿಚಿತ್ರ ಕಥೆಗಳು ಮತ್ತು ಘಟನೆಗಳ ಬಗ್ಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತೆ. ಸಧ್ಯ ಹಾಪುರದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಅಲ್ಲಿ ತಾಯಿ ಎಷ್ಟು ಹೇಳಿದ್ರೂ ಕೇಳದೇ ಪುಟ್ಟ ಮಗುವೊಂದು, ಕೋಪದಿಂದ ಪೊಲೀಸರಿಗೆ ಕರೆ ಮಾಡಿದೆ. ನಂತ್ರ ತುರ್ತು ಕರೆಯನ್ನ ಸ್ವೀಕರಿಸಿದ ಪೊಲೀಸರು ಮಗುವಿನ ಮನೆಗೆ ತಲುಪಿದ್ದಾರೆ. ಮುಂದೇನಾಯ್ತು ಗೊತ್ತಾ.?
ಕೋಪಗೊಂಡ ಮಗು ಪೊಲೀಸರಿಗೆ ಕರೆ.!
ಹಾಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ, ಒಂಬತ್ತು ವರ್ಷದ ಬಾಲಕನೊಬ್ಬ 112 ಸಂಖ್ಯೆಗೆ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಅವನ ಮನೆ ತಲುಪಿದ್ದಾರೆ. ನಂತ್ರ ಇಡೀ ಕಥೆ ತಿಳಿದ ನಂತ್ರ ನಕ್ಕು ವಾಪಸ್ಸಾಗಿದ್ದಾರೆ.
ಇಷ್ಟಕ್ಕೂ ನಡೆದಿದ್ದಾದ್ರು ಏನು.?
ಹಾಪುರದಲ್ಲಿ, ಪೊಲೀಸರು ಕರೆ ಸ್ವೀಕರಿಸಿದ ನಂತ್ರ ಮನೆ ಹುಡುಕಿಕೊಂಡು ಹೋದ ಪೊಲೀಸರಿಗೆ ಈ ಕರೆಯನ್ನ ಒಂಬತ್ತು ವರ್ಷದ ಮಗು ಮಾಡಿರುವುದು ಗೊತ್ತಾಗಿದೆ. ಆ ಮಗು ನನ್ನ ತಾಯಿಯ ಮೇಲೆ ಕೋಪಗೊಂಡಿದ್ದು, ಪೊಲೀಸರಿಗೆ ಕರೆ ಮಾಡಿದೆ. ಇನ್ನು “ನನಗೆ ಬೇಕಾದ ಶೈಲಿಯಲ್ಲಿ ಕೂದಲು ಕತ್ತರಿಸಲು ಪೋಷಕರು ನನಗೆ ಅವಕಾಶ ನೀಡಲಿಲ್ಲ. ಇನ್ನು ಈಗ ಮನೆಗೆ ಬಂದ ನಂತ್ರ ಚಳಿಯಲ್ಲಿ ಪದೇ ಪದೇ ಸ್ನಾನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹಾಗಾಗಿ ನಾನು ಕೋಪದಿಂದ 112 ಸಂಖ್ಯೆಗೆ ಕರೆ ಮಾಡಿರುವುದಾಗಿ ಮಗು ಹೇಳಿದೆ.
ಮುಂದೇನಾಯ್ತು.?
ಪೊಲೀಸರು ಇಡೀ ವಿಷಯ ಅರ್ಥ ಮಾಡಿಕೊಂಡ ಪೊಲೀಸರಿಗೆ ನಗು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿಲ್ಲ. ನಂತ್ರ ಪೊಲೀಸರು ಮಗುವಿಗೆ ತಿಳಿ ಹೇಳಿದ್ದಾರೆ. ಸ್ನಾನದಿಂದಾಗಿ ದೇಹವು ಆರೋಗ್ಯಕರವಾಗಿರುವುದರಿಂದ ಪೋಷಕರು ನಿಮ್ಮ ಒಳಿತಿಗಾಗಿ ಇದನ್ನ ಹೇಳುತ್ತಿದ್ದಾರೆ ಎಂದು ಹೇಳಿದರು. ಮಗು ಹೇಗೋ ಪೊಲೀಸರ ಮನವೊಲಿಕೆಗೆ ಒಪ್ಪಿದ್ದು, ತನ್ನ ಕೋಪವನ್ನ ಬಿಟ್ಟಿದೆ.
BREAKING NEWS : UPSC ‘ಸ್ಟೆನೋಗ್ರಾಫರ್’ ಲಿಖಿತ ಪರೀಕ್ಷೆಗೆ ದಿನಾಂಕ ಬಿಡುಗಡೆ, ಇಲ್ಲಿದೆ ಡಿಟೈಲ್ಸ್.!