ಉಕ್ರೇನ್ : ಆರ್ಥೊಡಾಕ್ಸ್ ಕ್ರಿಸ್ ಮಸ್ ಹಿನ್ನೆಲೆಯಲ್ಲಿ ನಿನ್ನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, 36 ಗಂಟೆಗಳ ಕದನ ವಿರಾಮವನ್ನು ಘೋಷಿಸಿ ಆದೇಶ ಹೊರಡಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಪೂರ್ವ ಭಾಗದಲ್ಲಿ ಶೆಲ್ ದಾಳಿಗಳು ನಡೆದಿವೆ ಎಂದು AFP ವರದಿ ಮಾಡಿದೆ.
ಆಕ್ರಮಣಕಾರರು ಉಕ್ರೇನ್ ಪೂರ್ವ ಭಾಗದಲ್ಲಿರುವ ನಗರಗಳಲ್ಲಿ ಎರಡು ಬಾರಿ ಶೆಲ್ ನಡೆಸಿದ್ದಾರೆ. ಪರಿಣಾಮ ವಸತಿ ಕಟ್ಟಡಕ್ಕೆ ಹೊಡೆತ ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕಿರಿಲೋ ಟಿಮೊಶೆಂಕೊ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಮಾಧ್ಯಮ ವರದಿಯ ಪ್ರಕಾರ, ಆರ್ಥೊಡಾಕ್ಸ್ ಕ್ರಿಸ್ಮಸ್ ಆಚರಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಬೆಳಿಗ್ಗೆ 9 ರಿಂದ ಶನಿವಾರ ರಾತ್ರಿ 9 ರ ನಡುವೆ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದರು. ರಷ್ಯಾ ಮತ್ತು ಉಕ್ರೇನ್ನಲ್ಲಿ ವಾಸಿಸುವವರು ಸೇರಿದಂತೆ ಅನೇಕ ಆರ್ಥೊಡಾಕ್ಸ್ ಕ್ರಿಶ್ಚಿಯನ್ನರು ಜನವರಿ 6 ಮತ್ತು 7 ರಂದು ಕ್ರಿಸ್ಮಸ್ ಆಚರಿಸುತ್ತಾರೆ.
ಇದು ಸುಮಾರು 11 ತಿಂಗಳ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೊದಲ ಬಾರಿಗೆ ಕದನ ವಿರಾಮದ ಕ್ರಮವಾಗಿದೆ. ಇನ್ನು ರಷ್ಯಾದ ಕದನ ವಿರಾಮವನ್ನು ಉಕ್ರೇನ್ ಅಧ್ಕಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿರಸ್ಕರಿಸಿದ್ದರು.
Good News : ಕೇಂದ್ರ ಸರ್ಕಾರದ ಅದ್ಭುತ ಯೋಜನೆ ; ‘ಅಕೌಂಟ್’ನಲ್ಲಿ ಹಣವಿಲ್ಲದಿದ್ರೂ ₹10,000 ಹಿಂಪಡೆಯ್ಬೋದು |PMJDY
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ: ಶೀಘ್ರವೇ ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನು ಸ್ವರೂಪ – ಸಿಎಂ ಬೊಮ್ಮಾಯಿ ಘೋಷಣೆ