ಓಕಿಯೋ (ಜಪಾನ್ ): ಕೆಲವು ದಿನಗಳಿಂದ ಚೀನಾ ಸೇರಿದಂತೆ ಅನೇಕ ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಂತೆ ಜಪಾನಿನಲ್ಲೂ ಕೊರೊನಾ ಹೆಚ್ಚಳಗೊಂಡಿದ್ದು, ಕೇಲವ ಒಂದು ದಿನದಲ್ಲಿ 456 ಕೋವಿಡ್ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ.
ಚೀನಾ ಮತ್ತು ಜಪಾನ್ನಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಪಾನ್ ಇಂದು 456 ಕೋವಿಡ್ ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ. ದೇಶದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಾವಿರಾರು ಜನರನ್ನು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ದೇಶವು 245,542 ಕರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದ್ದು, ಗುರುವಾರದಿಂದ 18,638 ಹೆಚ್ಚಾಗಿದೆ. ಟೋಕಿಯೊ 20,720 ಹೊಸ ಪ್ರಕರಣಗಳನ್ನು ವರದಿ ಮಾಡಿದೆ.
ಓಮಿಕ್ರಾನ್ ರೂಪಾಂತರ ತೀವ್ರತೆಯ ದರವು ಕುಸಿದಿದ್ದರೂ, ರೂಪಾಂತರ ಪ್ರಸರಣದಲ್ಲಿ ಏರಿಕೆ ಕಂಡು ಬಂದಿದೆ ಎಂದು ಅಲ್ಲಿನ ಮಾದ್ಯಮಗಳು ವರದಿ ಮಾಡಿವೆ.
ಜಪಾನ್ನಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ಕೋವಿಡ್ -19 ನಿಂದ ಸಾವನ್ನಪ್ಪುವವರ ಸಂಖ್ಯೆ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಸುಮಾರು 16 ಪಟ್ಟು ಹೆಚ್ಚಾಗಿದೆ. ಈ ವರ್ಷದ ಆಗಸ್ಟ್ 31 ರಿಂದ ಡಿಸೆಂಬರ್ 27 ರವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ, 80 ರ ಹರೆಯದ ಸುಮಾರು 40.8 ರಷ್ಟು ಜನರ ಸಾವುಗಳು ಸಂಭವಿಸಿವೆ.
‘ವಿಕಲಚೇತನ ಮಕ್ಕಳ’ ಪೋಷಕರೇ ಗಮನಿಸಿ: ‘ನಿರಾಮಯ ಆರೋಗ್ಯ ವಿಮಾ ಯೋಜನೆ’ಗೆ ಅರ್ಜಿ ಆಹ್ವಾನ