ಬೆಂಗಳೂರು: ಈ ಹಿಂದೆ ದಾಖಲಾಗಿದ್ದಂತ ಪ್ರಕರಣದಲ್ಲಿ, ಈಗ ಪೋಸ್ಕೋ ಕೇಸ್ ನಲ್ಲಿ ಜೈಲು ಪಾಲಾಗಿರುವಂತ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೋರ್ಟ್ ನಿಂದ ಶ್ರೀಗಳ ವಿರುದ್ಧ ಬಾಡಿ ವಾರೆಂಟ್ ಜಾರಿಗೊಳಿಸಲಾಗದೆ. ಅಲ್ಲದೇ ಖುದ್ದು ಕೋರ್ಟ್ ಗೆ ಹಾಜರುಪಡಿಸುವಂತೆ ತಿಳಿಸಲಾಗಿದೆ.
ಈ ಸಂಬಂಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಮುರುಘಾ ಶ್ರೀಗಳನ್ನು ಫೆಬ್ರವರಿ 9ರಂದು ಖುದ್ದು ಕೋರ್ಟ್ ಗೆ ಹಾಜರುಪಡಿಸುವಂತೆ ಚಿತ್ರದುರ್ಗ ಎಸ್ಪಿ ಪರುಶುರಾಮ್ ಗೆ ಬಾಡಿ ವಾರೆಂಟ್ ಜಾರಿಗೊಳಿಸಲಾಗಿದೆ.
ಅಂದಹಾಗೆ ಮುರುಘಾ ಶ್ರೀಗಳ ವಿರುದ್ಧ 2009ರಲ್ಲಿ ಬೆಂಗಳೂರಿನ ಪಿ.ಎಸ್ ಪ್ರಕಾಶ್ ಎಂಬುವರು ತಿಪ್ಪಶೆಟ್ಟಿ ಮಠದ ಆಸ್ತಿ ದುರ್ಬಳಕೆ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 420, 405, 406, 418 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಕೇಸ್ ವಿಚಾರಣೆಗೆ ಮುರುಘಾ ಶ್ರೀಗಳು ನಿರಂತರವಾಗಿ ಗೈರು ಹಾಜರಾಗಿದ್ದರು.
ಇಂದು ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್, ಫೆಬ್ರವರಿ 9ರಂದು ಮುರುಘಾ ಶ್ರೀಗಳನ್ನು ಖುದ್ದು ವಿಚಾರಣೆಗೆ ಹಾಜರುಪಡಿಸುವಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬಾಡಿ ವಾರೆಂಟ್ ನಲ್ಲಿ ತಿಳಿಸಿದೆ. ಹೀಗಾಗಿ ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ.
BIGG NEWS: ಯುಎನ್ ಮಿಷನ್ ಗೆ ‘ಭಾರತೀಯ ಮಹಿಳಾ ಶಾಂತಿಪಾಲಕರ’ ದೊಡ್ಡ ತುಕಡಿ ಸೇರ್ಪಡೆ | India Women Peacekeepers
ಹಾವೇರಿ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರ ಭಾಷಣದಲ್ಲೇ ‘ಡಬಲ್ ಎಂಜಿನ್ ಸರ್ಕಾರ’ ಟೀಕಿಸಿದ ‘ಸಾಹಿತಿ ದೊಡ್ಡರಂಗೇಗೌಡ’