ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೃದಯ ವಿದ್ರಾವಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಹಠಾತ್ ಹೃದಯಾಘಾತದಿಂದ ಒಬ್ಬ ವ್ಯಕ್ತಿಯು ಹೇಗೆ ಸಾಯುತ್ತಾನೆ ಅನ್ನೋದನ್ನ ನೀವು ಲೈವ್ ಆಗಿ ನೋಡಬಹುದು. ದೆಹಲಿ ಎನ್ಸಿಆರ್ನ ಫರಿದಾಬಾದ್’ನರುವ ಮೆಡಿಕಲ್ ಶಾಪ್ನಲ್ಲಿ ಈ ಘಟನೆ ನಡೆದಿದ್ದು, ಅದ್ರಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
23 ವರ್ಷದ ವ್ಯಕ್ತಿಯೊಬ್ಬರು ಒಆರ್ಎಸ್ ಪಡೆಯಲು ಇಲ್ಲಿನ ಮೆಡಿಕಲ್ ಶಾಪ್’ಗೆ ಹೋಗಿದ್ದು, ಅಲ್ಲೇ ಆತ ಹೃದಯಾಘಾತವಾಗಿದೆ. ಇನ್ನು ಆ ವ್ಯಕ್ತಿ ಕೇವಲ 2-3 ನಿಮಿಷಗಳಲ್ಲಿ ಸಾವನ್ನಪ್ಪಿದ್ದಾನೆ. ಹೃದಯಾಘಾತಕ್ಕೆ ಮೊದಲು, ಯುವಕ ತನ್ನ ಎದೆಯ ಮೇಲೆ ಕೈ ಹಾಕುವುದನ್ನ ಸಹ ಕಾಣಬಹುದು. ಆದ್ರೆ, ಹೃದಯಘಾತಕ್ಕೂ ಮುನ್ನ ಆತ ಸಾಮಾನ್ಯವಾಗಿ ಮೆಡಿಕಲ್ ಸ್ಟೋರ್ ಮುಂದೆ ನಿಂತಿರೋದನ್ನ ನೋಡಬೋದು. ಸಾವಿನ ಅಂತಹ ಲೈವ್ ವೀಡಿಯೊವನ್ನ ನೋಡಿದ ಯಾರಾದರೂ ಒಮ್ಮೆ ಬೆಚ್ಚಿ ಬೀಳುತ್ತಾರೆ.
ಸಾವಿನ ಲೈವ್ ವಿಡಿಯೋ ವೈರಲ್.!
ಮಾಹಿತಿಯ ಪ್ರಕಾರ, ಈ 23 ವರ್ಷದ ಯುವಕನ ಹೆಸರು ಸಂಜಯ್, ಮೂಲತಃ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಿವಾಸಿ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಅವರು ಮೆಡಿಕಲ್ ಸ್ಟೋರ್ನಲ್ಲಿ ಔಷಧಿ ತೆಗೆದುಕೊಳ್ಳುತ್ತಿದ್ದಾಗ, ಸ್ವಲ್ಪ ಸಮಯದ ನಂತರ ಇದ್ದಕ್ಕಿದ್ದಂತೆ ಅವರು ಕೆಳಗೆ ಬಿದ್ದು ಕೆಳಗೆ ಬೀಳುವುದನ್ನ ನೋಡಿ, ಅಂಗಡಿಯಲ್ಲಿ ಹಾಜರಿದ್ದ ವ್ಯಕ್ತಿ ಕೂಡ ಭಯಭೀತರಾಗಿ ಅವರ ಬಳಿಗೆ ಬರುವುದನ್ನ ಕಾಣಬಹುದು. ಇಡೀ ಘಟನೆಯು ಈ ಮೆಡಿಕಲ್ ಸ್ಟೋರ್ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
मौत की लाईव वीडियो सीसीटीवी में कैद फरीदाबाद में मेडिकल स्टोर पर ORS लेने गए युवक ने तोड़ा दम @police_haryana @FBDPolice pic.twitter.com/0YSlLXm4fX
— Tricity Today (@tricitytoday) January 5, 2023
ಶಿವಮೊಗ್ಗ: ಭ್ರಷ್ಟ ಅಧಿಕಾರಿಗಳ ವಿರುದ್ಧ ತ್ವರಿತ ಕಾನೂನು ಕ್ರಮ – ಲೋಕಾಯುಕ್ತ ಬಿ.ಎಸ್.ಪಾಟೀಲ್ ಎಚ್ಚರಿಕೆ