ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದಂತೆ ಬುಧವಾರ (ಜನವರಿ 4) ಬೆಳಗ್ಗೆ ಹೂಗಳನ್ನು ತುಂಬಿದ ಟ್ರ್ಯಾಕ್ಟರ್ ಟ್ರಾಲಿಗಳೊಂದಿಗೆ ರೈತರು ಅವರನ್ನು ಸ್ವಾಗತಿಸಿದರು.
ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರನ್ನು ರೈತರು ಸ್ವಾಗತಿಸುತ್ತಿರುವ ದೃಶ್ಯಾವಳಿಗಳ ನಡುವೆ, ಆನ್ಲೈನ್ನಲ್ಲಿ ಚರ್ಚೆಯ ವಿಷಯವೊಂದು ವೈರಲ್ ಆಗಿದೆ. ಇದು ಮೀರತ್ನ ಕಾಂಗ್ರೆಸ್ ಕಾರ್ಯಕರ್ತ ಫೈಸಲ್ ಚೌಧರಿ ಅವರ ಕ್ಲಿಪ್ ಆಗಿದೆ. ಇವರು ರಾಹುಲ್ ಗಾಂಧಿಯ ಪ್ರತಿರೂಪದಂತೆ ಕಾಣುತ್ತಾರೆ. ಇವರು ಬುಧವಾರ ಬಾಗ್ಪತ್ನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ವೇಳೆ ಎಲ್ಲರ ಗಮನ ಸೆಳೆದಿದ್ದಾರೆ.
ವೀಡಿಯೋದಲ್ಲಿ, ಚೌಧರಿ ರಾಹುಲ್ ಗಾಂಧಿಯಂತೇ ಬಿಳಿ ಪೋಲೋ ಟೀ-ಶರ್ಟ್ ಧರಿಸಿರುವುದನ್ನು ನೋಡಬಹುದು.
#WATCH | Uttar Pradesh: Faisal Chaudhary, a Congress worker in Meerut, who’s a look-alike of Congress MP Rahul Gandhi, joined ‘Bharat Jodo Yatra’ yesterday in Baghpat. pic.twitter.com/wy6oEQhdaj
— ANI (@ANI) January 5, 2023
“ನಾನು ಮೀರತ್ ಕಾಂಗ್ರೆಸ್ ಸಮಿತಿಯ ಸದಸ್ಯ. ನಾನು ನಿನ್ನೆ ಮಧ್ಯಾಹ್ನದಿಂದ (ಮಂಗಳವಾರ) ವಾಕಿಂಗ್ ಮಾಡುತ್ತಿದ್ದೇನೆ. ಜನರುನಾನು ರಾಹುಲ್ ಗಾಂಧಿಯಂತೆ ಕಾಣುತ್ತೇನೆ ಎನ್ನುತ್ತಾರೆ. ಇದು ನನಗೆ ಒಳ್ಳೆಯದನಿಸುತ್ತದೆ. ಜನರು ನನ್ನೊಂದಿಗೆ ಫೋಟೋವನ್ನು ಸಹ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ನಾನು ಕಾಂಗ್ರೆಸ್ನ ಕಾರ್ಯಕರ್ತ ಕೂಡ ”ಎಂದು ಚೌಧರಿ ಹೇಳಿಕೊಂಡಿದ್ದಾರೆ.
BIG NEWS: ʻವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಮುಸ್ಲಿಂ ಮಹಿಳೆಗಿದೆʼ: ಹೈಕೋರ್ಟ್ ಮಹತ್ವದ ತೀರ್ಪು
BIG NEWS: ʻವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಮುಸ್ಲಿಂ ಮಹಿಳೆಗಿದೆʼ: ಹೈಕೋರ್ಟ್ ಮಹತ್ವದ ತೀರ್ಪು
BIGG NEWS : ದಟ್ಟವಾದ ಮಂಜು ಆವರಿಸಿದ ದೆಹಲಿ : ಐಜಿಐ ವಿಮಾನ ನಿಲ್ದಾಣದಲ್ಲಿ 35 ವಿಮಾನಗಳು ವಿಳಂಬ