ಹಾವೇರಿ: ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಮ್ಮೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಖುಷಿ ವಿಚಾರವಾಗಿದೆ ಎಂದು ಹೇಳಿದ್ದಾರೆ.ಹಾವೇರಿ ಸಾಹಿತಿಗಳ ನಾಡು, ಈ ನೆಲದ ಅಸ್ಮಿತೆ ಎತ್ತಿ ಹಿಡಿಯುತ್ತಿದೆ. ಕನ್ನಡ , ಕನ್ನಡ ಸಾಹಿತ್ಯ, ರಚನೆ ಬಹಳ ಮುಖ್ಯ ಎಂದಿದ್ದಾರೆ.
ಕನ್ನಡದ ಮಸೂದೆ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು.
BIGG NEWS: ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ; ಮುತ್ಸದ್ದಿಗಳ ಬಾಯಲ್ಲಿ ಈ ರೀತಿ ಮಾತು ಸರಿಯಲ್ಲ; ಜಿ.ಟಿ ದೇವೇಗೌಡ
ಬೆಂಗಳೂರಿನಲ್ಲಿ ಪರ್ಯಾಯಸಮ್ಮೇಳನ ಆಯೋಜನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹಿಂದೆಯೂ ಇಂತಹ ಪರ್ಯಾಯ ಸಮ್ಮೇಳನ ಬಹಳಷ್ಟು ನಡೆದಿದೆ. ಅಲ್ಲಿ ಚರ್ಚೆ ಆಗುವ ವಿಷಯಗಳನ್ನ ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದರು.ಇನ್ನು ಸಿಎಂ ಮೂಗಿನ ನೇರದಲ್ಲಿ ಭ್ರಷ್ಟಾಚಾರ ಎಂದು ಆರೋಪ ವಿಚಾರವಾಗಿ, ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ದಾರೆ. ನಾನು ಒಳ್ಳೆಯ ಕೆಲಸಕ್ಕೆ ಬಂದಿದ್ದೇನೆ ಆ ಬಗ್ಗೆ ನಾನು ಇಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
BIGG NEWS: ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ; ಮುತ್ಸದ್ದಿಗಳ ಬಾಯಲ್ಲಿ ಈ ರೀತಿ ಮಾತು ಸರಿಯಲ್ಲ; ಜಿ.ಟಿ ದೇವೇಗೌಡ