ಬೆಂಗಳೂರು : ಸೈಟ್ ಗಾಗಿ ಮಂಡ್ಯ ಪೊಲೀಸರ ಫೈಟ್ ನಡೆದಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರೇ ನ್ಯಾಯಕ್ಕಾಗಿ ಅಲೆದಾಟ ನಡೆಸಿದ್ದಾರೆ.
ಅಂಬರೀಶ್ ಆಪ್ತ,ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ವಿರುದ್ಧ ಪೊಲೀಸರು ಅನ್ಯಾಯದ ಆರೋಪ ಮಾಡಿದ್ದು, ಅಮರಾವತಿ ಡೆವಲಪರ್ಸ್ ವಿರುದ್ದ ಪೊಲೀಸರು ಆಕ್ರೋಶ ಹೊರ ಹಾಕಿದ್ದಾರೆ. ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ಬಳಿ ಸೈಟ್ ಗಾಗಿ ಫೈಟ್ ಮಾಡಲಾಗಿದೆ. ಕಳೆದ 12 ವರ್ಷಗಳಿಂದ ನಿವೇಶನಕ್ಕಾಗಿ ಪೊಲೀಸರು ಪರದಾಡುತ್ತಿದ್ದಾರೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಇರುವ ಲೇಔಟ್ ಮಾಡಿ ನಿವೇಶನ ಕೊಡುವುದಾಗಿ ಹೇಳಿದ್ದ ಅಮರಾವತಿ ಚಂದ್ರಶೇಖರ್ ಒಂದು ಸೈಟ್ ಗೆ 4 ಲಕ್ಷ ,20 ಸಾವಿರದಂತೆ 508 ಸೈಟ್ ಕೊಡುವುದಾಗಿ ಅಮರಾವತಿ ಚಂದ್ರಶೇಖರ್ ತಿಳಿಸಿದ್ದರು.
2009ರಲ್ಲಿ ಮುಂಗಡ ಹಣ ಪಡೆದು 508 ಸೈಟ್ ಗೆ ಬುಕ್
ಈಗಾಗಲೇ ಮುಂಗಡವಾಗಿ ಶೇ 90 ರಷ್ಟು ಹಣ ಪಡೆದುಕೊಂಡಿರೊ ಚಂದ್ರಶೇಖರ್ 2 ವರ್ಷಗಳಿಂದ ಸೈಟ್ ಕೊಡದೆ ಪೊಲೀಸರನ್ನ ಅಲೆದಾಡಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ನೂರಾರು ಜನ ಪೊಲೀಸರು ಹಾಗೂ ನಿವೃತ್ತ ಪೊಲೀಸ್ ರಿಂದ ಅಮಾರಾವತಿ ಚಂದ್ರಶೇಖರ್ ನನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಹಲವು ಬಾರಿ ನಿಮಗೆ ಟೈಂ ಕೊಟ್ಟಿದ್ದೀವಿ. ಇನ್ಯಾವಾಗ ಸೈಟ್ ಕೊಡ್ತಿರಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.ನಾನು ಕೆಲಸ ಮಾಡಿದ್ದೀನಿ. ಅದೇನ್ ಮಾಡ್ತಿರೊ ಮಾಡ್ಕೊಹೋಗಿ ಎಂದ ಅಮರಾವತಿ ಚಂದ್ರಶೇಖರ್ ಸವಾಲ್ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ನಿವೇಶನಗಳನ್ನ ಗುರ್ತಿಸದೆ ಕೆಲಸ ನಡೆಸುತ್ತಿರುವ ಚಂದ್ರಶೇಖರ್ ಒಂದು ಅಡಿಗೆ 190 ರೂ ಎಂದು ಇಂದು 399 ರೂ ಅಂತ ಹೇಳ್ತಿದ್ದಾರೆ. ನಮಗೆ ನ್ಯಾಯ ಬೇಕು.ಒಡವೆ ಅಡವಿಟ್ಟು ಸೈಟ್ ಗೆ ನೊಂದಣಿ ಮಾಡಿಸಿದ್ವಿ.ಅಂಬರೀಶ್ ಅವರು ಇದ್ದಂತ ಸಂದರ್ಭದಲ್ಲಿ ನಮ್ಮ ಕುಟುಂಬ ಮನವಿ ಮಾಡಿತ್ತು,ಆ ಸಂದರ್ಭದಲ್ಲಿ ಅಂಬರೀಶ್ ಅವರು ಕೊಡಿಸುವುದಾಗಿ ಹೇಳಿದ್ರು.ಆದ್ರೂ ಸಹ ನಮಗೆ ಸೈಟ್ ಕೊಡದೆ ತಡ ಮಾಡಿದ್ದಾರೆ.
ನಮಗೆ ಈ ರೀತಿಯ ಅನ್ಯಾಯವಾಗಿದೆ ನ್ಯಾಯ ಬೇಕು ಎಂದು ಪೊಲೀಸರ ಪಟ್ಟು ಹಿಡಿದಿದ್ದಾರೆ.ಪೊಲೀಸರ ಒತ್ತಾಯಕ್ಕೆ ಮಣಿದ ಅಮರಾವತಿ ಡೆವಲಪರ್ಸ್.ಈಗಾಗಲೇ ಲೇಔಟ್ ರೆಡಿಯಾಗುತ್ತಿದೆ.ಒಂದು ಲೇಔಟ್ ಮಾಡಲು ಹತ್ತಾರು ವರ್ಷ ಬೇಕಾಗುತ್ತೆ, ಕೊರೊನಾದಿಂದ ತಡವಾಗಿದೆ.ಮಾರ್ಚ್ ವೇಳೆಗೆ ನಿವೇಶನ ಕೊಡುವುದಾಗಿ ಅಮರಾವತಿ ಚಂದ್ರಶೇಖರ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
BREAKING NEWS: ಗುತ್ತಿಗೆದಾರ ಸಂತೋಪ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಈಶ್ವರಪ್ಪಗೆ ಮತ್ತೆ ಸಂಕಷ್ಟ
‘ಹಣ ಕೊಡುವುದಾದರೆ ನನಗೆ ನೇರವಾಗಿ ಕೊಡ್ತಾ ಇದ್ದರು’ : ಕಾಂಗ್ರೆಸ್ ಆರೋಪಕ್ಕೆ ಸಚಿವ ಸಿಸಿ ಪಾಟೀಲ್ ತಿರುಗೇಟು