ಬಾಗಲಕೋಟೆ: ಕ್ಯಾಂಟರ್ ಲಾರಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಈ ಅವಘಡದಲ್ಲಿ ಸುಮಾರು 14 ಮಂದಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟೆಯ ಗದ್ದನಕೇರಿ ಬಳಿ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿ ರಾಹುಲ್ ಪಾಟೀಲ್ ಸಾವನ್ನಪ್ಪಿದ್ದಾನೆ.
ಬಸ್ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿತ್ತು. ಈ ವೇಳೆ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಕ್ಯಾಂಟರ್ ಲಾರಿ ಹೊರಟಿತ್ತು. ಆದರೆ ಕ್ಯಾಂಟರ್ ಲಾರಿ ಚಾಲಕ ಅತೀ ವೇಗದಿಂದ ಬಂದು ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮವಾಗಿ ಪಿಯುಸಿ ವಿದ್ಯಾರ್ಥಿ ರಾಹುಲ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಾಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ‘ಕನ್ನಡ ಸಾಹಿತ್ಯ ಸಮ್ಮೇಳನ’ ಸಾಹಿತಿಗಳ ಸಮ್ಮಿಲನ : ದೊಡ್ಡ ರಂಗೇಗೌಡ |Kannada Sahitya Sammelana