ಇಂದೋರ್: ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಇಂದೋರ್ನಲ್ಲಿ ಗುರುವಾರ ನಡೆದಿದೆ.
ಮೃತನನ್ನು ಹೋಟೆಲ್ ಮಾಲೀಕ ಪ್ರದೀಪ್ ರಘುವಂಶಿ ಎಂದು ಗುರುತಿಸಲಾಗಿದೆ. ಇಂದೋರ್ನ ಸ್ಕೀಮ್ ನಂಬರ್ 78 ಏರಿಯಾದಲ್ಲಿ ಈ ಘಟನೆ ನಡೆದಿದೆ.
ಘಟನೆಯ ವಿಡಿಯೋ ಜಿಮ್ನಲ್ಲಿದ್ದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ಟ್ರೆಡ್ಮಿಲ್ನಲ್ಲಿ ಕಸರತ್ತು ನಡೆಸಿದ ನಂತ್ರ, ಪ್ರದೀಪ್ ಕೊಂಚ ಸುತ್ತಮುತ್ತ ಓಡಾಡಿದ್ದಾರೆ. ಇದೇ ವೇಳೆ ತನ್ನ ಜಾಕೆಟ್ ಅನ್ನು ತೆಗೆದಿದ್ದು, ಹಠಾತ್ತನೆ ಕುಸಿದು ಬೀಳುವುದನ್ನು ನೋಡಬಹುದು.
इंदौर के जिम में होटल संचालक की अटैक से मौत
जिम में ट्रेडमिल पर दौड़ने के दौरान आया अटैक
सीसीटीवी कैमरे में कैद घटना का वीडियो| pic.twitter.com/VKO7sA3lFU— Priya singh (@priyarajputlive) January 5, 2023
ಜಿಮ್ನಲ್ಲಿ ಕೆಲಸ ಮಾಡುತ್ತಿದ್ದವರು ಕೂಡಲೇ ಪ್ರದೀಪ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಅಲ್ಲಿ ವೈದ್ಯರು ಪ್ರದೀಪ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
BREAKING NEWS : ಅಫ್ಘಾನಿಸ್ತಾನದ ಗಡಿಯಲ್ಲಿ 11 ಮಂದಿ ಉಗ್ರರನ್ನು ಹತ್ಯೆಗೈದ ಪಾಕ್ | Pak Kills 11 Militants
BREAKING NEWS : ಅಫ್ಘಾನಿಸ್ತಾನದ ಗಡಿಯಲ್ಲಿ 11 ಮಂದಿ ಉಗ್ರರನ್ನು ಹತ್ಯೆಗೈದ ಪಾಕ್ | Pak Kills 11 Militants