ಬೆಂಗಳೂರು: ವಿಧಾನಸೌಧಕ್ಕೆ ಆಗಮಿಸಿದ್ದಂತ ಎಇ ಜಗದೀಶ್ ಎಂಬುವರ ಬಳಿಯಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ಈ ಸಂಬಂಧ ನಗದು ಜಪ್ತಿ ಮಾಡಿದ್ದಂತ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ನಿನ್ನೆ ವಿಚಾರಣೆ ವೇಳೆ ಪತ್ತೆಯಾದ ನಗದು ಹಣದ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ, ಎಇ ಜಗದೀಶ್ ಅನ್ನು ಬಂಧಿಸಿದ್ದಾರೆ.
ಇದೀಗ ಘಟನೆ ಕುರಿತು ಜಗದೀಶ್ ಪರ ವಕೀಲ ರಾಜು ವಡೇಕರ್ ಟ್ವೀಟ್ ಮಾಡಿದ್ದು, ಡಿಸಿಪಿ ಅಣತಿಯಂತೆ ಜಗದೀಶ್ ರನ್ನು ಪೊಲೀಸರು ಅಕ್ರಮವಾಗಿ ಕೂಡಿ ಹಾಕಿದ್ದಾರೆ, ನಮ್ಮ ಮನವಿಯನ್ನು ಕೂಡ ಸ್ವೀಕರಿಸಲಿಲ್ಲ ಎಂದು ಕಿಡಿಕಾರಿದ್ದಾರೆ. ವಕೀಲರ ಮನವಿಯನ್ನು ಸ್ವೀಕರಿಸಲು ಒಪ್ಪದೆ ಡಿ.ಸಿ.ಪಿ ಅವರ ಅಣತಿಯಂತೆ ಪ್ರಕರಣದ ವಿಚಾರಣೆಗೆ ವಕೀಲರ ಮುಖಾಂತರ ಠಾಣೆಗೆ ಹಾಜರಾದ ವ್ಯಕ್ತಿಯನ್ನು ಆಕ್ರಮವಾಗಿ ಠಾಣೆಯಲ್ಲಿ ಕೂಡಿ ಹಾಕಿದ ವಿಧಾನ ಸೌದ ಪೋಲಿಸ್ ಠಾಣೆಯ ಸಿಬ್ಬಂದಿಗಳು ಎಂದು ಟ್ವೀಟ್ ಮಾಡಿದ್ದಾರೆ.
ಎಇ ಜಗದೀಶ್ ಬಳಿಯಲ್ಲಿ ವಿಧಾನಸೌಧದಲ್ಲಿ ಪೊಲೀಸರು ತಪಾಸಣೆ ನಡೆಸುವಂತ ಸಂದರ್ಭದಲ್ಲಿ 10.5 ಲಕ್ಷ ನಗದು ಪತ್ತೆಯಾಗಿತ್ತು. ವಿಧಾನಸೌಧ ಪೊಲೀಸರು ಆ ಹಣವನ್ನು ಜಪ್ತಿ ಮಾಡಿ, ಸೂಕ್ತ ದಾಖಲೆಯೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.ನಿನ್ನೆ ವಿಧಾನಸೌಧ ಪೊಲೀಸ್ ಠಾಣೆಯ ವಿಚಾರಣಾಧಿಕಾರಿಯ ಮುಂದೆ ತಮ್ಮ ವಕೀಲರೊಂದಿಗೆ ಹಾಜರಾದಂತ ಎಇ ಜಗದೀಶ್, ಪತ್ತೆಯಾದಂತ 10.5 ಲಕ್ಷ ನಗದು ಸಂಬಂಧ ಸರಿಯಾದ ಸಮರ್ಪಕ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿಯೇ ಅವರನ್ನು ವಿಧಾನಸೌಧ ಪೊಲೀಸರು ಬಂಧಿಸಿರೋದಾಗಿ ತಿಳಿದು ಬಂದಿದೆ.
ವಕೀಲರ ಮನವಿಯನ್ನು ಸ್ವೀಕರಿಸಲು ಒಪ್ಪದೆ ಡಿ.ಸಿ.ಪಿ ಅವರ ಅಣತಿಯಂತೆ ಪ್ರಕರಣದ ವಿಚಾರಣೆಗೆ ವಕೀಲರ ಮುಖಾಂತರ ಠಾಣೆಗೆ ಹಾಜರಾದ ವ್ಯಕ್ತಿಯನ್ನು ಆಕ್ರಮವಾಗಿ ಠಾಣೆಯಲ್ಲಿ ಕೂಡಿ ಹಾಕಿದ ವಿಧಾನ ಸೌದ ಪೋಲಿಸ್ ಠಾಣೆಯ ಸಿಬ್ಬಂದಿಗಳು. pic.twitter.com/xiDPkZ1oIG
— Raju Gadekar (@RajuGadekar13) January 5, 2023
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನಾಳೆ ಬೀದರ್ ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ