ಉತ್ತರಕನ್ನಡ: ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಬಹಿರಂಗ ಪತ್ರವನ್ನು ಬರೆದಂತ ಆರೋಪಿಯನ್ನು, ಚೈನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ರಾಜ್ಯದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಇಂತಹ ಪ್ರದೇಶದಲ್ಲಿಯೇ ಬಾಂಬ್ ಸ್ಪೋಟಿಸುವುದಾಗಿ ಭಟ್ಕಳ ಠಾಣೆಯ ಪೊಲೀಸರಿಗೆ ಬೆದರಿಕೆ ಪತ್ರವೊಂದು ಬಂದಿತ್ತು.
ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಡಿಸೆಂಬರ್ 31, 2022ರಂದು ಬಂದಿದ್ದಂತ ಪತ್ರದ ಜಾಡು ಹಿಡಿದು ಜಾಲಾಡ ತೊಡಗಿದರು. ಬೆದರಿಕೆ ಪತ್ರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಬಂದಿರೋ ವಿಚಾರ ತಿಳಿದು ಬಂದಿದೆ. ಇದೇ ವೇಳೆಯಲ್ಲಿ ಇಂತದ್ದೇ ಪತ್ರ ಚೆನ್ನೈ ಪೊಲೀಸರಿಗೂ ಬಂದ ಕಾರಣ, ಅಲ್ಲಿನ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಇದೇ ಸಂದರ್ಭದಲ್ಲಿ ಹೊಸಪೇಟೆಯ ಕಮಲಾಪುರದ ಹನುಮಪ್ಪ, ಲ್ಯಾಪ್ ಟಾಪ್ ಅಂಗಡಿಗೆ ತೆರಳಿ, ತನ್ನ ಬಳಿಯಿದ್ದನ್ನು ಮಾರಾಟ ಮಾಡುತ್ತಿರೋದಾಗಿ ತಿಳಿಸಿದ್ದಾನೆ. ಆದ್ರೇ ಅಂಗಡಿ ಮಾಲೀಕ ಲ್ಯಾಪ್ ಟಾಪ್ ಪಾಸ್ ವರ್ಡ್ ಕೇಳಿದಾಗ ತಡಬಡಿಸಿದಾಗ, ಹನುಮಪ್ಪನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಂತರಾಜ್ಯ ಕಳ್ಳನಾಗಿದ್ದಂತ ಹನುಮಪ್ಪ ಚೆನ್ನೈನ ಅಂಗಡಿಯಲ್ಲಿ ಲ್ಯಾಪ್ ಟಾಪ್ ಕದ್ದಿರೋ ಮಾಹಿತಿ ತಿಳಿದು ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಂತ ವೇಳೆಯಲ್ಲಿ ಚೆನ್ನೈ ಪೊಲೀಸರಿಗೆ, ಭಟ್ಕಳ ಪೊಲೀಸರಿಗೆ ಬಾಂಬ್ ಬ್ಲಾಸ್ಟ್ ಪತ್ರ ಬರೆದಿದ್ದು, ಇದೇ ಹನುಮಪ್ಪ ಎಂಬುದಾಗಿ ತಿಳಿದು ಬಂದಿದೆ. ಆತನನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ ಸಾಲಸೌಲಭ್ಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಮಂಡ್ಯದ ಮದ್ದೂರು ಕ್ಷೇತ್ರದ ಪ್ರತಿ ಮನೆಗೆ ಸಂಕ್ರಾಂತಿ ಗಿಫ್ಟ್: ಸೀರೆ, ಬಾಗೀನ ವಿತರಣೆಗೆ ಕದಲೂರು ಉದಯ್ ಚಾಲನೆ
BREAKING NEWS: ವಿಧಾನಸೌಧದಲ್ಲಿ ಅನಧಿಕೃತ 10.5 ಲಕ್ಷ ನಗದು ಪತ್ತೆ ಪ್ರಕರಣ: ವಿಚಾರಣೆಗೆ ಹಾಜರಾದ ಎಇ ಜಗದೀಶ್ ಬಂಧನ