ಶಿವಮೊಗ್ಗ: ನಗರದ ತುಂಗಾ ನದಿ ತೀರದಲ್ಲಿ ಶಂಕಿತ ಉಗ್ರ ತಾರಿಕ್ ಸೇರಿದಂತೆ ಇತರರು ನಡೆಸಿದಂತ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಈ ಘಟನೆಯ ಹಿಂದೆ ಐಸಿಸ್ ಒಳಸಂಚು ಇರೋದನ್ನು ಎನ್ಐಎ ಅಧಿಕಾರಿಗಳ ತಂಡ ಪತ್ತೆ ಹಚ್ಚಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಇಂದು ರಾಜ್ಯದ 6 ಕಡೆಯಲ್ಲಿ ಟ್ರಯಲ್ ಬ್ಲಾಸ್ಟ್ ಸಂಬಂಧ ದಾಳಿ ಕೂಡ ನಡೆಸಿದೆ.
ಶಿವಮೊಗ್ಗದಲ್ಲಿ ನಡೆದಿದ್ದಂತ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಕಾ ದಳದ ಅಧಿಕಾರಿಗಳು ಇಂದು ಚುರುಕುಗೊಳಿಸಿದ್ದಾರೆ. ಟ್ರಯಲ್ ಬ್ಲಾಸ್ಟ್ ಸಂಬಂಧ ಇಂದು ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 6 ಕಡೆಯಲ್ಲಿ ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಮಂಜುನಾಥ ಬಡವಾಣೆಯ ಶಂಕಿತರ ಮನೆಯ ಮೇಲೆ ದಾಳಿ ನಡೆಸಿರುವಂತ ಎನ್ಐಎ ಅಧಿಕಾರಿಗಳ ತಂಡವು, ಮನೆಯಲ್ಲಿ ಪೆನ್ ಡ್ರೈವ್ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಪತ್ತೆ ಹಚ್ಚಿ ವಶ ಪಡಿಸಿಕೊಂಡಿರೋದಾಗಿ ತಿಳಿದು ಬಂದಿದೆ.
ಇನ್ನೂ ಶಿವಮೊಗ್ಗದ ತುಂಗಾ ತೀರದ ಬಾಂಬ್ ಬ್ಲಾಸ್ಟ್ ಕೇಸ್ ನಲ್ಲಿ ಐಸಿಸ್ ಒಳಸಂಚು ಇರೋದ ಬಗ್ಗೆಯೂ ಎನ್ಐಎ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ ಎನ್ನಲಾಗುತ್ತಿದೆ. ಹೀಗಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೂ ಒಳಪಡಿಸುತ್ತಿರೋದಾಗಿ ತಿಳಿದು ಬಂದಿದೆ.