ಇಂದೋರ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಂತಹ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರಲ್ಲೂ ಈ ಸಮಸ್ಯೆ ಕಾಡುತ್ತಿದೆ.ಅಂತಹದ್ದೆ ಘಟನೆಯೊಂದು ಮಧ್ಯಪ್ರದೇಶದ ಇಂದೋರಿನಲ್ಲಿ ವರದಿಯಾಗಿದೆ.
ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೋಟೆಲ್ ಮಾಲೀಕರೋರ್ವರು ಕುಸಿದು ಸಾವನ್ನಪ್ಪಿದ್ದಾರೆ. ಇಂದೋರಿನಲ್ಲಿ ಈ ಘಟನೆ ನಡೆದಿದ್ದು , ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
जिम में वर्कआउट के दौरान हार्ट अटैक के मामले देशभर में बढ़ते जा रहे है, ऐसा ही एक मामला इंदौर से सामना आया है। यहां एक होटल संचालक की जिम में हार्ट अटैक से मौत हो गई, कैमरे में कैद हुआ शॉकिंग मंजर।#Indore #latestnews #lucknowkibaat32 pic.twitter.com/oXOj4LHDyO
— लखनऊ की बात (@Lucknowkibaat32) January 5, 2023
ವಿಡಿಯೋದಲ್ಲಿ ಟ್ರೆಡ್ಮಿಲ್ನಲ್ಲಿ ನಡೆದ ನಂತರ ವ್ಯಕ್ತಿ ಬೆವರುತ್ತಿರುವುದನ್ನು ಕಾಣಬಹುದು. ಅವನು ತನ್ನ ಜಾಕೆಟ್ ಅನ್ನು ತೆಗೆದಾಗ, ಅವನಿಗೆ ತಲೆತಿರುಗುವಿಕೆ ಪ್ರಾರಂಭವಾಗುತ್ತದೆ. ಕೂಡಲೇ ಹತ್ತಿರದಲ್ಲಿದ್ದ ಟೇಬಲ್ನಿಂದ ಸಹಾಯದಿಂದ ನಿಲ್ಲಲು ಪ್ರಯತ್ನಿಸುತ್ತಾರೆ. ಆದರೆ ನೆಲದ ಮೇಲೆ ಕುಸಿದು ಬೀಳುತ್ತಾರೆ. ತಕ್ಷಣ ಅಲ್ಲಿದ್ದ ಇತರ ವ್ಯಕ್ತಿಗಳು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವ್ಯಕ್ತಿಯೂ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಮೃತ ವ್ಯಕ್ತಿಯನ್ನು ಪ್ರದೀಪ್ (55) ಎಂದು ಗುರುತಿಸಲಾಗಿದೆ. ಈತ ಹೋಟೆಲ್ ಮಾಲೀಕನಾಗಿದ್ದು,ಈತ ಪ್ರತಿದಿನ ಜಿಮ್ ನಲ್ಲಿ ಎರಡು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ – ನಿತಿನ್ ಗಡ್ಕರಿ
BREAKING NEWS: ಶಿವಮೊಗ್ಗದಲ್ಲಿ ಉಗ್ರನ ಜೊತೆಗೆ ಸಂಪರ್ಕಿತನ ನಿವಾಸದ ಮೇಲೆ ಎನ್ಐಎ ದಾಳಿ | NIA Officer Raid