ಭೋಪಾಲ್: ಭೋಪಾಲ್ನ ಸರ್ಕಾರಿ ಸ್ವಾಮ್ಯದ ಗಾಂಧಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಹಾಸ್ಟೆಲ್ನಲ್ಲಿ 24 ವರ್ಷದ ಯುವ ವೈದ್ಯೆಯೊಬ್ಬರು ಅರಿವಳಿಕೆ ಔಷಧವನ್ನು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತಳನ್ನು ಆಕಾಂಶಾ ಮಹೇಶ್ವರಿ ಎಂದು ಗುರುತಿಸಲಾಗಿದ್ದು, ಬುಧವಾರ ಸಂಜೆ ಅವರ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸರು ಆಕೆಯ ಕೊಠಡಿಯಿಂದ ಖಾಲಿ ಇಂಜೆಕ್ಷನ್ ಬಾಟಲುಗಳು ಮತ್ತು ಸಿರಿಂಜ್ ಅನ್ನು ವಶಪಡಿಸಿಕೊಂಡಿದ್ದಾರೆ. ವೈದ್ಯೆ ತಲಾ 2.5 ಮಿಲಿಯ ನಾಲ್ಕು ಡೋಸ್ ಅರಿವಳಿಕೆಯನ್ನು ಚುಚ್ಚಿಕೊಂಡಿದ್ದಾರೆ ಎಂದು ಕೋಹ್-ಇ-ಫಿಜಾ ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ಸಿಸೋಡಿಯಾ ತಿಳಿಸಿದ್ದಾರೆ.
ವೈದ್ಯೆ ಸಾವಿಗೀಡಾದ ಕೊಠಡಿಯಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ʻತನಗೆ ಮಾನಸಿಕವಾಗಿ ಬಲವಿಲ್ಲ ಮತ್ತು ಕೆಲಸದೊತ್ತಡ ತಾಳಲಾಗುತ್ತಿಲ್ಲʼ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ದೇ, ವೈದ್ಯೆ ತನ್ನ ಪೋಷಕರಿಗೆ ಕ್ಷಮೆಯಾಚಿಸುವುದಾಗಿ ಬರೆದಿದ್ದಾರೆ. ವೈದ್ಯೆ ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕಾಂಶಾ ಮಹೇಶ್ವರಿ ಅವರು ಸರ್ಕಾರಿ ಜಿಎಂಸಿಯಿಂದ ಪೀಡಿಯಾಟ್ರಿಕ್ಸ್ ಸ್ಟ್ರೀಮ್ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು ಮತ್ತು ಕೋರ್ಸ್ನ ಮೊದಲ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದರು.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
BIG NEWS : 7,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ʻಸೇಲ್ಸ್ಫೋರ್ಸ್ʼ | ʻSalesforceʼ Layoff
WATCH VIDEO: ʻಚಹಾʼ ಕುಡಿಯಲು ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡಿದ ಚಾಲಕ!… ವಿಡಿಯೋ ವೈರಲ್
BIG NEWS : 7,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ʻಸೇಲ್ಸ್ಫೋರ್ಸ್ʼ | ʻSalesforceʼ Layoff
WATCH VIDEO: ʻಚಹಾʼ ಕುಡಿಯಲು ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡಿದ ಚಾಲಕ!… ವಿಡಿಯೋ ವೈರಲ್