ರಾಮನಗರ : ಕರ್ನಾಟಕಕ್ಕೆ ಭೇಟಿ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರು – ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿಯ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಕೆಂಪೇಗೌಡನ ದೊಡ್ಡಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಮಾತನಾಡಿ, ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿ ವೀಕ್ಷಣೆ.
ಕಾಮಗಾರಿ ಪ್ರಗತಿ ಸವಾಲು ಸಮಸ್ಯೆ ಗಮನಿಸಿ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಸ್ಫಂದಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿದ್ದಾರೆ.
ಓರ್ವ ಕೇಂದ್ರದ ಮಂತ್ರಿ ರಾಜ್ಯಕ್ಕೆ ಭೇಟಿ ನೀಡುವುದು ತುಂಬಾನೆ ವಿಶೇಷ. ಸಣ್ಣ ದೊಡ್ಡ ಸಮಸ್ಯೆ ಇದ್ರೂ ಸ್ಪಂದನೆ ನೀಡುವ ಕಾರ್ಯ ಶ್ಲಾಘನೀಯ . ಮದ್ದೂರು, ಮಂಡ್ಯ, ರಾಮನಗರ, ಚನ್ನಪಟ್ಟಣ ಎಕ್ಸಿಟ್ ಎಂಟ್ರಿ ಮಾಹಿತಿ ನೀಡುತ್ತಾರೆ. ಇಲ್ಲಿಂದ ಬಂಟ್ವಾಳ ಗೆ ಹೆಚ್ಚಿಸುವ ಹಾಗೂ ಮಂಗಳೂರಿನ ಏರ್ಪೋಟ್ ಆಲ್ಟರ್ನೇಟಿವ್ ರಸ್ತೆಯಾಗಿ ಬೆಳೆಯಲಿದೆ. ದಶಪಥ ಹೆದ್ದಾರಿ ಮಧ್ಯದಲ್ಲಿ ಜಾಗ ಗುರುತಿಸಿ ಅಲ್ಲಿ ಎಲ್ಲಾ ಸೌಕರ್ಯ ನೀಡುವ ಕೆಲಸ ಆಗುತ್ತದೆ ಪ್ರತಿಕ್ರಿಯೆ ನೀಡಿದ್ದಾರೆ
ದಶಪಥ ಹೆದ್ದಾರಿಗೆ ಹೆಸರಿಡುವ ವಿಚಾರ:
ಈ ಸಂದರ್ಭದಲ್ಲಿ ದಶಪಥ ಹೆದ್ದಾರಿಗೆ ಹೆಸರಿಡುವ ವಿಚಾರದ ಬಗ್ಗೆಯೂ ಮಾತನಾಡಿದ್ದು, ನಾಲ್ವಡಿ ಹೆಸರು ಒಳ್ಳೆಯದು ಅದಕ್ಕೆ ನಮ್ಮ ಸಹಮತ ಇದೆ. ಇಡೀ ಏಷ್ಯಾ ಖಂಡಕ್ಕೆ ಪ್ರಥಮಿಗರು ನಾಲ್ವಡಿ ಒಡೆಯರ್. ಅವರ ಹೆಸರು ಬಂದ್ರೆ ಸ್ವಾಗತಾರ್ಹವಾಗಿದೆ. ಕಾವೇರಿ ಹೆಸರು ನಾವು ಯಾವ ಕಣ್ಣು ಬೇಕು ಅಂತಾ ಕೇಳಿದ್ರೆ ಹೇಗೆ? ಅವರವರ ಅಭಿಪ್ರಾಯ ಅವರದ್ದು ಸಚಿವ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ