ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ವರ್ಷ ಹಲವು ದೈತ್ಯ ಕಂಪನಿಗಳು ತನ್ನ ಹಲವಾರು ಉದ್ಯೋಗಿಗಳನ್ನು ವಜಾಗೊಸಿವೆ. 2023ರಲ್ಲೂ ಕೂಡ ಅನೇಕ ಕಂಪನಿಗಳು ಉದ್ಯೋಗಿಗನ್ನು ಮನೆಗೆ ಕಳುಹಿಸುವ ಯೋಜನೆಯಲ್ಲಿವೆ. ಇದರಲ್ಲಿ ಎಂಟರ್ಪ್ರೈಸ್ ಸಾಫ್ಟ್ವೇರ್ ಸಂಸ್ಥೆ ಸೇಲ್ಸ್ಫೋರ್ಸ್(Salesforce)
ಕೂಡ ಒಂದಾಗಿದೆ.
ಸೇಲ್ಸ್ಫೋರ್ಸ್ ತನ್ನ ಶೇಕಡಾ 10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಇದು 7,000 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.
ʻಈಗಿನ ಸ್ಥಿತಿಯು ಸವಾಲಾಗಿಯೇ ಉಳಿದಿದೆ. ನಮ್ಮ ಗ್ರಾಹಕರು ತಮ್ಮ ಖರೀದಿ ನಿರ್ಧಾರಗಳಿಗೆ ಹೆಚ್ಚು ಅಳತೆ ವಿಧಾನವನ್ನು ತೆಗೆದುಕೊಳ್ಳುತ್ತಿದ್ದಾರೆ. ನಾವು ಈಗ ಎದುರಿಸುತ್ತಿರುವ ಈ ಆರ್ಥಿಕ ಕುಸಿತಕ್ಕೆ ಕಾರಣವಾಗುವ ಹಲವಾರು ಜನರನ್ನು ನಾವು ನೇಮಿಸಿಕೊಂಡಿದ್ದೇವೆ ಮತ್ತು ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆʼ ಎಂದು ಸೇಲ್ಸ್ಫೋರ್ಸ್ ಸಹ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಬೆನಿಯೋಫ್ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದೀಗ ದೈತ್ಯ ಅಮೆಜಾನ್ ಕೂಡ 18,000 ಉದ್ದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.