ಅಹಮದಾಬಾದ್ : ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಚಿತ್ರ ‘ಪಠಾನ್(Pathaan)’ ಪ್ರಚಾರದ ವೇಳೆ ಭಜರಂಗದಳದ ಕಾರ್ಯಕರ್ತರ ಗುಂಪು ಅಹಮದಾಬಾದ್ನಲ್ಲಿ ಮಾಲ್ ಅನ್ನು ಧ್ವಂಸಗೊಳಿಸಿದೆ. ಪ್ರತಿಭಟನೆ ವೇಳೆ ಮಾಲ್ನ ವಸ್ತುಗಳಿಗೆ ಹಾನಿ ಮಾಡುವ ವೀಡಿಯೋವನ್ನು ಸೆರೆಹಿಡಿಯಲಾಗಿದೆ.
ವಿಎಚ್ಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದು ಮತ್ತು ಪೋಸ್ಟರ್ಗಳನ್ನು ಹರಿದು ಹಾಕುವುದು ಹಾಗೂ ಪಠಾಣ್ನ ದೊಡ್ಡ ಕಟ್ಔಟ್ಗಳನ್ನು ಹರಿದು ಹಾಕುವುದನ್ನು ನೋಡಬಹುದು.
#WATCH | Gujarat | Bajrang Dal workers protest against the promotion of Shah Rukh Khan’s movie ‘Pathaan’ at a mall in the Karnavati area of Ahmedabad (04.01)
(Video source: Bajrang Dal Gujarat’s Twitter handle) pic.twitter.com/NelX45R9h7
— ANI (@ANI) January 5, 2023
ಗುಜರಾತ್ ವಿಎಚ್ಪಿ ಈ ಹಿಂದೆ ಗುಜರಾತ್ನಲ್ಲಿ ಎಲ್ಲಿಯೂ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಮುಖ್ಯವಾಗಿ ‘ಬೇಷರಂ ರಂಗ್’ ಹಾಡಿನ ಕಾರಣ, ದೀಪಿಕಾ ಪಡುಕೋಣೆ ಶಾರುಖ್ ಖಾನ್ ಜೊತೆ ನೃತ್ಯ ಮಾಡುವಾಗ ಕೇಸರಿ ಉಡುಗೆಯನ್ನು ಧರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ.
“ಗುಜರಾತ್ನಲ್ಲಿ ಪಠಾಣ್ ಚಿತ್ರ ಪ್ರದರ್ಶನಕ್ಕೆ ನಾವು ಅವಕಾಶ ನೀಡುವುದಿಲ್ಲ. ಅಹಮದಾಬಾದ್ನಲ್ಲಿ ಚಿತ್ರದ ಬಿಡುಗಡೆ ವಿರುದ್ಧ ಇಂದಿನ ಪ್ರತಿಭಟನೆಯನ್ನು ರಾಜ್ಯಾದ್ಯಂತ ಎಲ್ಲಾ ಥಿಯೇಟರ್ ಮಾಲೀಕರು ಎಚ್ಚರಿಕೆಯಾಗಿ ತೆಗೆದುಕೊಳ್ಳಬೇಕು. ಅವರು ತಮ್ಮ ಥಿಯೇಟರ್ಗಳು ಅಥವಾ ಮಲ್ಟಿಪ್ಲೆಕ್ಸ್ಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವುದರಿಂದ ದೂರವಿರಬೇಕು” ಎಂದು ಗುಜರಾತ್ ವಿಎಚ್ಪಿ ವಕ್ತಾರ ಹಿತೇಂದ್ರಸಿಂಹ ರಜಪೂತ್ ಹೇಳಿದ್ದಾರೆ.
BIGG NEWS : ಉದ್ಯಮಿ ‘ಪ್ರದೀಪ್’ ಆತ್ಮಹತ್ಯೆ ಪ್ರಕರಣ : ಆರೋಪಿ ‘ರಾಘವ ಭಟ್’ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲು
BIGG NEWS : ಉದ್ಯಮಿ ‘ಪ್ರದೀಪ್’ ಆತ್ಮಹತ್ಯೆ ಪ್ರಕರಣ : ಆರೋಪಿ ‘ರಾಘವ ಭಟ್’ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲು