ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಶೀತದ ಅಲೆ ಮುಂದುವರಿದಿದೆ. ಇಂದು ಈ ಋತುವಿನ ಅತ್ಯಂತ ಚಳಿಯ ದಿನವನ್ನು ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇಂದು ಈ ಋತುವಿನ ಅತ್ಯಂತ ಚಳಿಯ ದಿನವಾಗಿದೆ. ಇಂದು ಸಫ್ದರ್ಜಂಗ್ ಮತ್ತು ಐಎನ್ಎ 4.4 ಡಿಗ್ರಿ ಸೆಲ್ಸಿಯಸ್ನ ಕನಿಷ್ಠ ತಾಪಮಾನವನ್ನು ದಾಖಲಿಸಿದೆ. ಡಿಸೆಂಬರ್ 25-27 ರ ನಡುವಿನ ಚಳಿಯಂತೆಯೇ ತಾಪಮಾನ ದಾಖಲಾಗಿದೆ ಎಂದು ಐಎಂಡಿ ವಿಜ್ಞಾನಿ ಡಾ.ಆರ್.ಕೆ.ಜೆನಮನಿ ಮಾಹಿತಿ ನೀಡಿದ್ದಾರೆ.
ಮುಂಬರುವ ವೆಸ್ಟರ್ನ್ ಡಿಸ್ಟರ್ಬನ್ಸ್ (ಡಬ್ಲ್ಯೂಡಿ) ನಿಂದಾಗಿ ನಗರದಲ್ಲಿ ಮುಂದಿನ 24-48 ಗಂಟೆಗಳ ಕಾಲ ಶೀತದ ಸ್ಥಿತಿ ಇರುತ್ತದೆ. ಮುಂದಿನ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಡಾ.ಜೆನಮಣಿ ತಿಳಿಸಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಶೀತ ಅಲೆಯ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದ್ದು, ನಂತರದಲ್ಲಿ ಶೀತದ ತೀವ್ರತೆಯು ಕಡಿಮೆಯಾಗಲಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ : ಟೆಕ್ನಿಕಲ್ ಆಫೀಸರ್ ಹುದ್ದೆಯ ನೇಮಕಾತಿ ಅಧಿಸೂಚನೆ ಮುಂದೂಡಿಕೆ
BIGG NEWS : ರಾಜ್ಯದಲ್ಲಿ ಇಂದು 34 ಜನರಿಗೆ ಕೊರೊನಾ ಸೋಂಕು ಧೃಡ : ಸಕ್ರಿಯ ಪ್ರಕರಣಗಳ ಸಂಖ್ಯೆ 309