ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದ ಬಳಿಯ ಹೆದ್ದಾರಿ ಸಿಗ್ನಲ್ನಲ್ಲಿ ಕಾಡು ಹುಲಿ ಮತ್ತು ಮರಿಯನ್ನು ರಸ್ತೆ ದಾಟಲು ಅರಣ್ಯ ಅಧಿಕಾರಿಯೊಬ್ಬರು ಸಂಚಾರವನ್ನು ಸ್ಥಗಿತಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ವನ್ಯಜೀವಿ ಜೀವಶಾಸ್ತ್ರಜ್ಞ ಮಿಲಿಂದ್ ಪರಿವಾಕಂ ಎಂಬುವವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. 11 ಸೆಕೆಂಡ್ಗಳಿರುವ ಕಿರು ವಿಡಿಯೋ ಕ್ಲಿಪ್ ನಲ್ಲಿ ಹುಲಿ ಮತ್ತು ಅದರ ಮರಿ ಕಾಡಿನ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುತ್ತಿದ್ದು, ಆ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಜನರ ದೊಡ್ಡ ಗುಂಪು ತಾಳ್ಮೆಯಿಂದ ಕಾಯುತ್ತಿರುವುದನ್ನು ಕಾಣಬಹುದು.
Everyday, tigers and other wildlife are endangered while crossing roads around Tadoba. When will NGT orders be implemented fully by @MahaForest @mahapwdofficial
On the +ve side, kudos to the crowd management here, maybe by @MahaForest staff like last year? pic.twitter.com/p7jCPoTZrP— Milind Pariwakam 🇮🇳 (@MilindPariwakam) January 4, 2023
ಈ ವಿಡಿಯೋ 17,000 ವೀಕ್ಷಣೆಗಳನ್ನು ಹಾಗೂ ಬಳಕೆದಾರರಿಂದ ಹಲವು ಕಾಮೆಂಟ್ಗಳನ್ನು ಪಡೆದಿದೆ. ಇನ್ನು ಅರಣ್ಯಾಧಿಕಾರಿಯ ಕಾರ್ಯಕ್ಕೆ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದ್ದಾರೆ.
BREAKING NEWS : ಚಿತ್ರದುರ್ಗದಲ್ಲಿ ಮಾಜಿ ಸಚಿವ H. ಆಂಜನೇಯ ಆಪ್ತನ ಮನೆ ಮೇಲೆ ಐಟಿ ದಾಳಿ |IT Raid