ಮದ್ರಾಸ್ : ಸಂಗಾತಿಗಳ ನಡುವೆ ವೈವಾಹಿಕ ವಿವಾದ ಉಂಟಾದಾಗ ಅಪ್ರಾಪ್ತ ಮಗು/ಮಕ್ಕಳನ್ನು ಕಾಪಾಡಿಕೊಳ್ಳಲು ತಂದೆ ಬದ್ಧನಾಗಿರುತ್ತಾನೆ. ಅವರಿಗೆ ಭೇಟಿ ನೀಡುವ ಹಕ್ಕುಗಳ ನಿರಾಕರಣೆ ಅಂತಹ ನಿರ್ವಹಣೆಯ ಪಾವತಿಯಿಂದ ವಿನಾಯಿತಿ ನೀಡಲು ಕಾರಣವಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಎಸ್ಎಂ ಸುಬ್ರಮಣ್ಯಂ ಅವರ ಪೀಠವು ಮಹಿಳೆಯೊಬ್ಬರು ಸಲ್ಲಿಸಿದ ಪ್ರಕರಣದ ವರ್ಗಾವಣೆ ಅರ್ಜಿಯಲ್ಲಿ ಆದೇಶಗಳನ್ನು ನೀಡುವಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ವಿಚಾರಣೆಯ ಸಂದರ್ಭದಲ್ಲಿ, ಮಹಿಳೆಯ ಪತಿ ತಾಯಿಯ ವಶದಲ್ಲಿರುವ ತಮ್ಮ ಅಪ್ರಾಪ್ತ ಮಗುವಿಗೆ ಮಧ್ಯಂತರ ಜೀವನಾಂಶವನ್ನು ಪಾವತಿಸುತ್ತಿಲ್ಲ ಎಂದು ನ್ಯಾಯಾಲಯವು ಗಮನಿಸಿತ್ತು.
ಅಪ್ರಾಪ್ತ ಮಗುವನ್ನು ನೋಡಿಕೊಳ್ಳಲು ಸಿದ್ಧನಿದ್ದರೂ ಹೆಂಡತಿ ಮಗುವನ್ನು ನೋಡಲು ಬಿಡುತ್ತಿಲ್ಲ, ಹೀಗಾಗಿ ಮಧ್ಯಂತರ ಜೀವನಾಂಶ ಕೊಡುವ ಸ್ಥಿತಿಯಲ್ಲಿಲ್ಲ ಎಂಬುದು ಪತಿ ಪರ ವಕೀಲರ ವಾದವಾಗಿತ್ತು.
ಮಗುವನ್ನು ಭೇಟಿ ಮಾಡಲು ಪತ್ನಿ ಅನುಮತಿ ನೀಡದ ಹೊರತು ಮಧ್ಯಂತರ ಜೀವನಾಂಶವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ವಕೀಲರು ಪುನರುಚ್ಚರಿಸಿದರು.
ಇದಕ್ಕೆ ನ್ಯಾಯಾಲಯವು ವ್ಯಕ್ತಿಗೆ ಛೀಮಾರಿ ಹಾಕಿದ್ದು, ಪ್ರತಿವಾದಿಯು ಸಾರ್ವಜನಿಕ ಸೇವಕನಾಗಿರುವ ಇಂತಹ ವಿಧಾನವನ್ನು ಯಾವುದೇ ಸಂದರ್ಭದಲ್ಲೂ ಈ ನ್ಯಾಯಾಲಯವು ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದೆ.
ಪೋಷಕರು ತಮ್ಮ ಅಪ್ರಾಪ್ತ ಮಕ್ಕಳನ್ನು ಕಾಪಾಡಿಕೊಳ್ಳಲು ಕರ್ತವ್ಯ ಬದ್ಧರಾಗಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ 11 ತಿಂಗಳ ಹೆಣ್ಣು ಮಗುವನ್ನು ಸಹಜ ಪಾಲಕರು ಮತ್ತು ಗಳಿಸುವ ಸದಸ್ಯರಾಗಿರುವ ತಂದೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರಸ್ತುತ ವಿಷಯದಲ್ಲಿ, ದಂಪತಿಗಳು 2020 ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗಿವಿದೆ. ಇಬ್ಬರ ನಡುವೆ ಮನಸ್ತಾಪ ಉಂಟಾಗಿ ದಂಪತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ಇದಾದ ನಂತರ ಪತಿ ಪೂನಮಲ್ಲಿಯಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಮೊಕದ್ದಮೆ ಹೂಡಿದ್ದರು.
ವಿಚಾರಣೆ ವೇಳೆ ಅಪ್ರಾಪ್ತ ಹೆಣ್ಣು ಮಗುವಿಗೆ ಪತಿ ಯಾವುದೇ ಮಧ್ಯಂತರ ಜೀವನಾಂಶ ನೀಡುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.ಈ ವೇಳವಮಗುವಿನ ಜೀವನೋಪಾಯಕ್ಕಾಗಿ ಪತಿಯು ಪತ್ನಿಯೊಂದಿಗೆ ಜೀವನಾಂಶವನ್ನು ಹಂಚಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
2022ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ: ನವಜಾತ ಶಿಶುಗಳ ಮರಣ ದರ ಇಳಿಕೆ, ಲಿಂಗಾನುಪಾತ ಹೆಚ್ಚಳ
ರಾಜ್ಯ ಸರ್ಕಾರದಿಂದ ‘ಹೈ-ರಿಸ್ಕ್ ದೇಶ’ಗಳ ಪ್ರಯಾಣಿಕರಿಗೆ ವಿಧಿಸಿದ್ದ ‘ಹೋಂ ಕ್ವಾರಂಟೈನ್’ ನಿಯಮ ಆದೇಶ ವಾಪಾಸ್