ಕೊಪ್ಪಳ : ಪಿ.ಎಂ.ಕಿಸಾನ್ ಯೋಜನೆಯಡಿ ಲಾಭ ಪಡೆಯದೆ ವಂಚಿತರಿರುವ ಅರ್ಹ ಹೊಸ ಫಲಾನುಭವಿಗಳು ಈ ಯೋಜನೆಯಡಿ ಇ-ಕೆವೈಸಿ ಹಾಗೂ ನೋಂದಣಿ ಮಾಡಿಸಿಕೊಳ್ಳುವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿ.ಎಂ.ಕಿಸಾನ್ ಯೋಜನೆಯಡಿ ಲಾಭ ಪಡೆಯದೆ ವಂಚಿತರಿರುವ ನೋಂದಣಿಯಾಗದೆ ಬಾಕಿ ಉಳಿದ ಅರ್ಹ ಫಲಾನುಭವಿಗಳ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಜಂಟಿ ಖಾತೆದಾರರು, ಪೌತಿ ಕಾರಣದಿಂದಾಗಿ ಖಾತೆ ವರ್ಗಾವಣೆಯಾಗಿರುವ ಫಲಾನುಭವಿಗಳು, ಒಂದೇ ಕುಟುಂಬದ ಸದಸ್ಯರೆಂದು ಭೂಹಿಡುವಳಿ ಹೊಂದಿರುವ ವಯಸ್ಕ ಮಕ್ಕಳು, ಹಿರಿಯ ನಾಗರೀಕರು ಹಾಗೂ ಮಾಹಿತಿಯ ಕೊರತೆಯಿಂದ ಈ ಎಲ್ಲಾ ಅರ್ಹ ಕಾರಣಗಳಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತ ಕುಟುಂಬಗಳು ಹಾಗೂ ಇತರೆ ಬಾಕಿ ಉಳಿದಿರುವ ಅರ್ಹ ಫಲಾನುಭವಿಗಳ ನೊಂದಣಿ ಮಾಡಿಸಲು ಹಾಗೂ ಇ-ಕೆವೈಸಿ ಮಾಡಿಸುವಂತೆ ರೈತ ಬಾಂಧವರಿಗೆ ಈ ಮೂಲಕ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂದಿಸಿದ ರೈತ ಸಮಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪಂರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.