ಮಂಗಳೂರು : ‘ರಸ್ತೆ, ಒಳಚರಂಡಿಯಂತಹ ಸಮಸ್ಯೆ ಬಿಟ್ಟು ಲವ್ ಜಿಹಾದ್ ಬಗ್ಗೆ ಯೋಜಿಸಿ, ಲವ್ ಜಿಹಾದ್ ತಡೆಯೋದಕ್ಕೆ ಮುಖ್ಯವಾಗಿ ಭಾರತಿಯ ಜನತಾ ಪಕ್ಷ ಬೇಕು ‘ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟರ್ ನಲ್ಲಿ ಕಿಡಿಕಾರಿರುವ ಕಾಂಗ್ರೆಸ್, “ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ” ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ. ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ ಬಿಜೆಪಿ ತಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ಒಪ್ಪಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
"ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ"
ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ.ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ @BJP4Karnataka ತಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ಒಪ್ಪಿಕೊಂಡಿದೆ.
— Karnataka Congress (@INCKarnataka) January 4, 2023
ರಸ್ತೆ, ಚರಂಡಿ, ರಸ್ತೆಗುಂಡಿಗಳ ಸಣ್ಣ ವಿಚಾರ, ರಸ್ತೆ ಗುಂಡಿಗಳಿಂದ ಜನ ಸತ್ತಿದ್ದೂ ಸಣ್ಣ ವಿಚಾರ, ಭ್ರಷ್ಟಾಚಾರ, ಕಮಿಷನ್ ಸಣ್ಣ ವಿಚಾರ, ಗುತ್ತಿಗೆದಾರರು ಸತ್ತಿದ್ದೂ ಸಣ್ಣ ವಿಚಾರ, 54 ಸಾವಿರ PSI ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗಿದ್ದೂ ಸಣ್ಣ ವಿಚಾರ. ಯುವಕರ ನಿರುದ್ಯೋಗವೂ ಸಣ್ಣ ವಿಚಾರ. ರಾಜ್ಯ ಬಿಜೆಪಿಗೆ ದೊಡ್ಡ ವಿಚಾರ ಯಾವುದು? ಎಂದು ಪ್ರಶ್ನಿಸಿದೆ.