ಚೆನ್ನೈ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ 22 ವರ್ಷದ ಟೆಕ್ಕಿಯ ಮೇಲೆ ಟ್ರಕ್ ಹರಿದಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಚೆನ್ನೈನಲ್ಲಿ ನಡೆದಿದೆ.
ಮೃತಳನ್ನು ಶೋಭನಾ ಎಂದು ಗುರುತಿಸಲಾಗಿದ್ದು, ಈಕೆ ಖಾಸಗಿ ಟೆಕ್ ಕಂಪನಿ ಝೋಹೋದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಶೋಭನಾ ತನ್ನ ಸಹೋದರನನ್ನು ನೀಟ್ ಕೋಚಿಂಗ್ ತರಗತಿ ಸಂಸ್ಥೆಗೆ ಬಿಡಲು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ತಮ್ಮನ ಕಣ್ಣೆದುರೇ ಶೋಭನಾ ಕೊನೆಯುಸಿರೆಳೆದಿದ್ದಾಳೆ. ಅಪಘಾತದಿಂದ ಸಹೋದರನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೋಭನಾ ಹಾಗೂ ಆಕೆಯ ಸಹೋದರ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸ್ಥಳದಿಂದ ಪರಾರಿಯಾಗಿದ್ದ ಚಾಲಕನನ್ನು ಮೋಹನ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.
SHOCKING NEWS: ಕಡಿಮೆ ಸಕ್ಕರೆ ಹಾಕಿದ ʻಟೀʼ ಕೊಟ್ಟ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದ ಯುವಕ
2,50,000 ʻಟ್ವಿಟ್ಟರ್ʼ ಖಾತೆಗಳನ್ನು ಅಮಾನತುಗೊಳಿಸುವಂತೆ ಯುಎಸ್ ಸರ್ಕಾರದಿಂದ ಒತ್ತಾಯ: ಎಲಾನ್ ಮಸ್ಕ್ ಮಾಹಿತಿ
SHOCKING NEWS: ಕಡಿಮೆ ಸಕ್ಕರೆ ಹಾಕಿದ ʻಟೀʼ ಕೊಟ್ಟ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದ ಯುವಕ
2,50,000 ʻಟ್ವಿಟ್ಟರ್ʼ ಖಾತೆಗಳನ್ನು ಅಮಾನತುಗೊಳಿಸುವಂತೆ ಯುಎಸ್ ಸರ್ಕಾರದಿಂದ ಒತ್ತಾಯ: ಎಲಾನ್ ಮಸ್ಕ್ ಮಾಹಿತಿ