ಮಂಗಳೂರು : ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಬಿಜೆಪಿಗೆ ಇಲ್ಲ ಎಂದುಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿವಾದಾತ್ಮಕ ಹೇಳಿಕೆಗೆ ಯು.ಟಿ ಖಾದರ್ ಪಂಚ್ ನೀಡಿದ್ದಾರೆ.
BIG NEWS: ರಸ್ತೆ, ಚರಂಡಿ ಸಣ್ಣಪುಟ್ಟ ವಿಷಯ ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಿ: ವಿವಾದತ್ಮಕ ಹೇಳಿಕೆ ಕೊಟ್ಟ ಕಟೀಲ್
ಸುದ್ದಿಗಾರರೊಂದಿಗೆ ಯು.ಟಿ ಖಾದರ್ ಮಾತನಾಡಿ, ರಸ್ತೆ, ಚರಂಡಿ ಸಣ್ಣಪುಟ್ಟ ವಿಷಯ ಬಿಡಿ ಮೊದಲು ಲವ್ ಜಿಹಾದ್ ವಿಚಾರದ ಬಗ್ಗೆ ಹೋರಾಡಿ ಎಂದು ಕಟೀಲ್ ಹೇಳುತ್ತಾರೆ. ಭಾವನಾತ್ಮಕ ವಿಚಾರವನ್ನು ಮುಂದೆ ತರುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಬಿಜೆಪಿಗೆ ಇಲ್ಲ ಎಂದು ಯು.ಟಿ ಖಾದರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
BIG NEWS: ರಸ್ತೆ, ಚರಂಡಿ ಸಣ್ಣಪುಟ್ಟ ವಿಷಯ ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಿ: ವಿವಾದತ್ಮಕ ಹೇಳಿಕೆ ಕೊಟ್ಟ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದೇನು?
ಮಂಗಳೂರಿನಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ರಸ್ತೆ, ಒಳಚರಂಡಿಯಂತಹ ಸಮಸ್ಯೆ ಬಿಟ್ಟು ಲವ್ ಜಿಹಾದ್ ಬಗ್ಗೆ ಯೋಜಿಸಿ, ಲವ್ ಜಿಹಾದ್ ತಡೆಯೋದಕ್ಕೆ ಮುಖ್ಯವಾಗಿ ಭಾರತಿಯ ಜನತಾ ಪಕ್ಷ ಬೇಕು ಲವ್ ಜಿಹಾದ್ ವಿರುದ್ದ ಕಾನೂನನ್ನ ಬಿಜೆಪಿ ಸರ್ಕಾರ ತರುತ್ತೆ ಎಂದಿದ್ದಾರೆ. ಇನ್ನು ಲವ್ ಜಿಹಾದ್ ಇತ್ತೀಚೆಗೆ ಕಾಡುತ್ತಿರುವ ಬಹಳ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಇದಕ್ಕೆ ನಿಮ್ಮ ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಿ. ಅದಕ್ಕೆ ಬಿಜೆಪಿಗೆ ಗೆಲ್ಲಿಸಿ ಅಧಿಕಾರ ನೀಡಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಯುವಕ-ಯುವತಿಯರ ರಕ್ಷಣೆಗೆ ಬದ್ಧವಾಗಿದೆ ಎಂದರು.
BIG NEWS: ರಸ್ತೆ, ಚರಂಡಿ ಸಣ್ಣಪುಟ್ಟ ವಿಷಯ ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಿ: ವಿವಾದತ್ಮಕ ಹೇಳಿಕೆ ಕೊಟ್ಟ ಕಟೀಲ್