ಬೆಂಗಳೂರು: ರಾಜ್ಯದ ಎಲ್ಲಾ ಬೋಧಕೇತರ ವೃಂದದ ಗ್ರೂಪ್-ಸಿ ನೌಕರರಿಗೆ ಖಾಯಂ ಪೂರ್ವ ಸೇವಾವಧಿ ತೃಪ್ತಿಕರವೆಂದು ಘೋಷಿಸಲು, ಕಾರ್ಯಕ್ಷಮತೆ ಹಾಗೂ ವಿಷಯ ಪರಿಣಿತಿ ಪರೀಕ್ಷೆಯನ್ನು ನಡೆಸೋದಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆಯ ಗ್ರೂಪ್ –ಸಿ ನೌಕರರಿಗೆ ಬಿಗ್ ಶಾಕ್ ನೀಡಲಾಗಿದೆ.
BIGG NEWS : ಹಾಸನ ಮಿಕ್ಸಿ ಬಾಂಬ್ ಸ್ಪೋಟ ಪ್ರಕರಣ : ಆರೋಪಿ ಅನೂಪ್ ಕುಮಾರ್ ಅರೆಸ್ಟ್
ಈ ಕುರಿತಂತೆ ಸಮಗ್ರ ಶಿಕ್ಷಣ-ಕರ್ನಾಟಕ ಬೆಂಗಳೂರು ಹಾಗೂ ಪರೀಕ್ಷಾ ಪ್ರಾಧಿಕಾರಿ ಸಹ ನಿರ್ದೇಶಕರು ಆದೇಶ ಹೊರಡಿಸಿದ್ದು, ಬೆಂಗಳೂರು ವಿಭಾಗದ ಸಿ ದರ್ಜೆಯ ನೌಕರರ ಕಾರ್ಯಕ್ಷಮೆತೆ ಹಾಗೂ ವಿಷಯ ಪರಿಣಿತಿಯ ಕುರಿತು ಲಿಖಿತ ಪರೀಕ್ಷೆ ನಡೆಸಲು ನಿರ್ಧರಿಸಿರೋದಾಗಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಬೋಧಕೇತರ ವೃಂದದ ಗ್ರೂಪ್ ಸಿ ನೌಕರರ ಖಾಯಂ ಪೂರ್ವ ಸೇವಾ ಅವಧಿ ತೃಪ್ತಿಕರವೆಂದು ಘೋಷಿಸಲು ಬಾಕಿ ಇರುವ ನೌಕರರುಗಳಿಗೆ ಕಾರ್ಯಕ್ರಮತೆ ಹಾಗೂ ವಿಷಯ ಪರಿಣಿತಿಯ ಕುರಿತು ಪ್ರತಿ ಮಾಹೆ 100 ಅಂಕಗಳಿಗೆ ಪರೀಕ್ಷೆ ನಡೆಸಲು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ಸಂಬಂಧ ಪಟ್ಟಂತೆ ಡಯಟ್ ಪ್ರಾಂಶುಪಾಲರು ಡಯಟ್ ವತಿಯಿಂದ ಆಯಾ ಜಿಲ್ಲೆಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರು ಖಾಯಂ ಪೂರ್ವ ಸೇವಾವಧಿ ತೃಪ್ತಿಕರವೆಂದು ಘೋಷಿಸಲು ಬಾಕಿ ಇರುವ ಎಲ್ಲಾ ನೌಕರರುಗಳಿಗೆ ಲಿಖಿತ ಪರೀಕ್ಷೆಗಳನ್ನು ಜಿಲ್ಲಾ ಕೇಂದ್ರದಲ್ಲಿಯೇ ಪರೀಕ್ಷೆ ನಡೆಸಲು ತಿಳಿಸಿದ್ದಾರೆ.