ನವದೆಹಲಿ: ಏರ್ ಇಂಡಿಯಾದ ಬ್ಯುಸಿನೆಸ್ ಕ್ಲಾಸ್ನಲ್ಲಿ ಕುಡುಕನೊಬ್ಬ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನವೆಂಬರ್ನಲ್ಲಿ ನಡೆದಿತ್ತು. ಇದೀಗ ಆತನನ್ನು ʻನೊ ಫ್ಲೈ ಲಿಸ್ಟ್ʼಗೆ ಸೇರಿಸಲು ಏರ್ಲೈನ್ಸ್ ತಿಳಿಸಿದೆ.
ನವೆಂಬರ್ 26 ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ 70 ವರ್ಷದ ಮಹಿಳೆ ಮೇಲೆ ಕುಡುಕ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಊಟದ ನಂತರ ಲೈಟ್ ಡಿಮ್ ಮಾಡಿದಾಗ ಈ ಘಟನೆ ನಡೆದಿದೆ.
ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದ ನಂತರ ವಿಮಾನಯಾನ ಸಂಸ್ಥೆ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ ಮತ್ತು
ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಏರ್ ಇಂಡಿಯಾ ಆಂತರಿಕ ಸಮಿತಿಯನ್ನು ರಚಿಸಿದ್ದು, ಈ ಕುಡುಕ ಪ್ರಯಾಣಿಕನನ್ನು ‘ನೊ-ಫ್ಲೈ ಲಿಸ್ಟ್’ಗೆ ಸೇರಿಸಲು ಶಿಫಾರಸು ಮಾಡಿದೆ. ಈ ವಿಷಯವು ಸರ್ಕಾರದ ಸಮಿತಿಯ ಅಡಿಯಲ್ಲಿದೆ ಮತ್ತು ನಿರ್ಧಾರಕ್ಕಾಗಿ ಕಾಯುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Full Moon: 2023ರಲ್ಲಿ ಯಾವ್ಯಾವ ದಿನಾಂಕದಂದು ʻಹುಣ್ಣಿಮೆʼ ಸಂಭವಿಸುತ್ತದೆ?… ಇಲ್ಲಿದೆ ಫುಲ್ ಲಿಸ್ಟ್!
Full Moon: 2023ರಲ್ಲಿ ಯಾವ್ಯಾವ ದಿನಾಂಕದಂದು ʻಹುಣ್ಣಿಮೆʼ ಸಂಭವಿಸುತ್ತದೆ?… ಇಲ್ಲಿದೆ ಫುಲ್ ಲಿಸ್ಟ್!