ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಪ್ರದೀಪ್ 3 ಕಡೆ ಡೆತ್ ನೋಟ್ಳನ್ನ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರದೀಪ್ ರೆಸಾರ್ಟ್ ಗೆ ತೆರಳಿ ಸಂಬಂಧಿಕರ ಕಾರಿನ ವೈಪರ್ ಬಳಿ ಒಂದನ್ನು ಇಟ್ಟಿದ್ದರು. ಮತ್ತೊಂದು ಡೆತ್ ನೋಟ್ ನ್ನು ಬ್ಯಾಂಕ್ ದಾಖಲೆಗಳನ್ನ ಅಟ್ಯಾಚ್ ಮಾಡಿ ಕಾರಿನಲ್ಲಿಟ್ಟಿದ್ದರು. ಅದನ್ನ ಗಮನಿಸದ ಸಂಬಂಧಿಕರು ರೆಸಾರ್ಟ್ನಿಂದ ಹೊರಟಿದ್ರು. ಪ್ರದೀಪ್ ಸಂಬಂಧಿಕರು ಹೋಗ್ತಿದ್ದ ಕಾರನ್ನ ಓವರ್ ಟೇಕ್ ಮಾಡಿ, ಒಂದು ಕಿ.ಮೀ ದೂರದಲ್ಲಿ ನಿಟ್ಟಿಗೆರೆ ಎಂಬಲ್ಲಿ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸದ್ಯ ಪ್ರದೀಪ್ ಡೆತ್ನೋಟ್ನಲ್ಲಿದ್ದ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಐವರು ಆರೋಪಿಗಳಿಗೆ ಕಗ್ಗಲೀಪುರ ಪೊಲೀಸ ರಿಂದ ನೊಟೀಸ್ ನೀಡಲಾಗಿದೆ.
BIGG NEWS : ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ : ರಸಗೊಬ್ಬರಗಳ ಮೇಲಿನ ಸಬ್ಸಿಡಿ ಕಡಿತ!