ಬಳ್ಳಾರಿ : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಬಳ್ಳಾರಿ ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳ ಸುಮಾರು ರೂ.223 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಇಲಾಖೆಗಳ ಸುಮಾರು ರೂ.440 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವರು.
ಉದ್ಘಾಟನೆಗೊಳ್ಳಲಿರುವ ಕಾಮಗಾರಿಗಳ ವಿವರ: ಜಿಲ್ಲೆಯಲ್ಲಿ ರೂ.31 ಕೋಟಿ ವೆಚ್ಚದ ನೂತನವಾಗಿ ನಿರ್ಮಾಣ ಮಾಡಿರುವ ಜಿಲ್ಲಾಡಳಿತ ಭವನ, ಹಲಕುಂದಿ ಮತ್ತು ಮುಂಡರಗಿ ಗ್ರಾಮದಲ್ಲಿ ರೂ.38.61 ಕೋಟಿ ವೆಚ್ಚದ ನಿವೇಶನ ಮತ್ತು ಸೇವೆ ಅಭಿವೃದ್ಧಿ ಯೋಜನೆ ಕಾಮಗಾರಿಯ ಉದ್ಘಾಟನೆ, ಕೊಳಗಲ್ಲು ಗ್ರಾಮದಲ್ಲಿ ರೂ.50.81 ಕೋಟಿ ವೆಚ್ಚದ ನಿವೇಶನ ಮತ್ತು ಸೇವೆ ಅಭಿವೃದ್ಧಿ ಯೋಜನೆ ಕಾಮಗಾರಿ ಉದ್ಘಾಟನೆ, ರೂ.6ಕೋಟಿ ವೆಚ್ಚದ ಅಥ್ಲೆಟಿಕ್ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಹಾಗೂ ಜಿಲ್ಲಾ ಕ್ರೀಡಾಂಗಣದ ಉನ್ನತೀಕರಣ ಕಾಮಗಾರಿ, ರೂ.21 ಕೋಟಿ ವೆಚ್ಚದ 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಅಸ್ಪತ್ರೆ ಕಾಮಗಾರಿ, ರೂ.4.90 ಕೋಟಿ ವೆಚ್ಚದ
ವೈದ್ಯಕೀಯ ದಾಖಲೆಗಳ ವಿಭಾಗ ಹಾಗೂ ರೇಡಿಯೋಲಾಜಿ ವಿಭಾಗಗಳ ನೂತನ ಕಟ್ಟಡ ಕಾಮಗಾರಿ, ರೂ.3 ಕೋಟಿ ವೆಚ್ಚದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಪುರುಷರ ವಸತಿ ನಿಲಯದ ನೆಲಮಹಡಿ ಕಾಮಗಾರಿ, ಸಂಡೂರು ತಾಲೂಕಿನ ಸುಶೀಲಾನಗರದಲ್ಲಿ ರೂ.21.63 ಕೋಟಿ ವೆಚ್ಚದ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪ.ಜಾತಿ) ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಘಾಟನೆ, ರೂ.3.49 ಕೋಟಿ ವೆಚ್ಚದ ಸಂಡೂರಿನ ಸರ್ಕಾರಿ ಪರಿಶಿಷ್ಟ ಪಂಗಡ ಮೆಟ್ರಿಕ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ, ಬಳ್ಳಾರಿ ನಗರದ ನಲ್ಲಚೆರವು ಪ್ರದೇಶದಲ್ಲಿ ರೂ.378.5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಭವನ ದುರಸ್ಥಿ ಕಾಮಗಾರಿ ಹಾಗೂ ನವೀಕರಣ ಕಾಮಗಾರಿ, ನಗರದ ಬೆಳಗಲ್ ಕ್ರಾಸ್ನಲ್ಲಿನ 2.35 ಕೋಟಿ ವೆಚ್ಚದ ಅಲ್ಪಸಂಖ್ಯಾತರ ಮೌಲಾನ ಅಜಾದ್ ಮಾದರಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ, ಸಂಡೂರಿನ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ, ಕಂಪ್ಲಿಯ ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ, ಕಮ್ಮರಚೇಡು ಗ್ರಾಮದ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ, ಬಾದನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 10 ಕೊಠಡಿಗಳ ನಿರ್ಮಾಣ ಕಾಮಗಾರಿ, ಬಂಡಿಹಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಿರ್ಮಿಸಲಾದ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ, ಬಾದನಹಟ್ಟಿ ಗ್ರಾಮದ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಕಾಮಗಾರಿ ಉದ್ಘಾಟನೆ, ಕುರುಗೋಡು ಮತ್ತು ಕಂಪ್ಲಿಯ ಪಶು ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ಕಾಮಗಾರಿ ಉದ್ಘಾಟನೆ, ಬಳ್ಳಾರಿ ನಗರದ ಆದೋನಿಕೆರೆ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ, 36ನೇ ವಾರ್ಡಿನ ಕುರಹಟ್ಟಿ -01ನೇ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ, ನಗರದಲ್ಲಿನ ಸರ್ಕಾರಿ ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿ, ಬಳ್ಳಾರಿ ನಗರದ ಪೆÇಲೀಸ್ ಅಧೀಕ್ಷಕರ ಕಚೇರಿಗೆ ಕಾಂಪೌಂಡ್ ಗೋಡೆ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಪೆÇಲೀಸ್ ಅಧೀಕ್ಷಕರ ಕಚೇರಿಯ ಆವರಣದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಕಾಮಗಾರಿ, ರೆಡ್ಕ್ರಾಸ್ ಪ್ರಥಮ ಚಿಕಿತ್ಸೆ ತರಬೇತಿ ಶಾಲೆ ಮತ್ತು ಸೆಂಟಿನರಿ ಬಿಲ್ಡಿಂಗ್ ನಿರ್ಮಾಣ ಕಾಮಗಾರಿ, ವಿ.ಎಸ್.ಕೆ ವಿಶ್ವವಿದ್ಯಾಲಯದಲ್ಲಿ ಲೈಫ್ ಸೈನ್ಸ್ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಘಾಟನೆ, ಬಾದನಹಟ್ಟಿ ಗ್ರಾಮದ ಸರ್ಕಾರಿ ಪದವಿ ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ ನೂತನ ಕಟ್ಟಡ ಕಾಮಗಾರಿ, ವಿಮ್ಸ್ ಆವರಣದಲ್ಲಿ ಸ್ನಾತಕೋತ್ತರ ಪದವೀಧರರಿಗೆ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿಗಳಿಗೆ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಭೂಮಿಪೂಜೆ ನೆರವೇರಲಿರುವ ಕಾಮಗಾರಿಗಳ ವಿವರ: ಮಿಂಚೇರಿ ಗ್ರಾಮದಲ್ಲಿ ರೂ.107.23 ಕೋಟಿ ವೆಚ್ಚದ ನಿವೇಶನ ಮತ್ತು ಸೇವೆ ಅಭಿವೃದ್ಧಿ ಯೋಜನೆ ಕಾಮಗಾರಿಯ ಭೂಮಿಪೂಜೆ, ವಿಮ್ಸ್ನಲ್ಲಿ ರೂ.109 ಕೋಟಿ ವೆಚ್ಚದ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿ ಹಾಗೂ ವೈದ್ಯಕೀಯ ಉಪಕರಣಗಳ ಭೂಮಿಪೂಜೆ, ಕಂಪ್ಲಿ ಮತ್ತು ಕುರುಗೋಡು ಪಟ್ಟಣದಲ್ಲಿ 100 ಹಾಸಿಗೆಯ ತಾಲ್ಲೂಕು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ,
ಸೋಮಸಮುದ್ರ (ಕೊಳಗಲ್ಲು) 220/114 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ, ಕಂಪ್ಲಿ ಮತ್ತು ಕುರುಗೋಡು ತಾಲೂಕಿನ 33/11 ಕೆ.ವಿ ವಿದ್ಯುತ್ ಉಪಕೇಂದದಿಂದ 110/11 ಕೆ.ಎ.ವಿದ್ಯುತ್ ಉಪಕೇಂದ್ರಕ್ಕೆ ಉನ್ನತೀಕರಿಸುವ ಕಾಮಗಾರಿ, ಮೋಕಾ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ವಸತಿ ಗೃಹ ಕಟ್ಟಡ (ಜಿ+1) ನಿರ್ಮಾಣ ಕಾಮಗಾರಿ ಮತ್ತು ಗ್ರಾಮೀಣ ಸಂಕಿರ್ಣ ಮಾರುಕಟ್ಟೆ ಮೇಟಿ ಸ್ವ ಸಹಾಯ ಸಂಘದ
ಕಾರ್ಯಗಾರದ ಕೊಠಡಿ ನಿರ್ಮಾಣ (ಜಿ+1) ಕಾಮಗಾರಿಯ ಭೂಮಿಪೂಜೆ, ಬಳ್ಳಾರಿ
ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಸಿಬ್ಬಂದಿಗಳಿಗೆ ಜಿ+1, 02 ವಸತಿ ಗೃಹ ನಿರ್ಮಾಣ ಕಾಮಗಾರಿ, ನಗರದ ವಾರ್ಡ್ ನಂ.39 ಕೋಟೆ ಮಲ್ಲೇಶ್ವರ ದೇವಸ್ಥಾನದ ವರೆಗೆ ಬಿ.ಟಿ.ರಸ್ತೆ ಕಾಮಗಾರಿ, 14 ನೇ ವಾರ್ಡ್ನಲ್ಲಿ ಶಾಂತಿಧಾಮದ ಅಭಿವೃದ್ಧಿ ಕಾಮಗಾರಿ, ಡಿ.ದೇವರಾಜ್ ಅರಸು ಮೆಟ್ರಿಕ್ ನಂತರ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಮಹಿಳೆಯರ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿ, ಎಂ.ಎ.ಕೆ ಆಜಾದ್ ಸರ್ಕಾರಿ ಪ್ರೌಢ ಶಾಲೆಯ ಕೊಠಡಿಗಳ ನಿರ್ಮಾಣ ಕಾಮಗಾರಿ, ಶ್ರೀರಾಂಪುರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ, ಕಂಪ್ಲಿಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸರ್ಕಾರಿ ಗೋಶಾಲೆ ಕಾಮಗಾರಿ ಭೂಮಿಪೂಜೆ, ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆ ಅಡಿಯಲ್ಲಿ ಬಳ್ಳಾರಿ-ಕಲ್ಯಾಣದುರ್ಗ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 0.00ರಿಂದ 0.80ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, 5054-ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆ ಅಡಿಯಲ್ಲಿ ಬಳ್ಳಾರಿ ನಗರದ ಗುಗ್ಗರಹಟ್ಟಿ-ಹೊನ್ನಳ್ಳಿ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 0.00 ರಿಂದ 1.20 ರವರೆಗೆ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಮತ್ತು ಪಾದಾಚಾರಿ ರಸ್ತೆ ನಿರ್ಮಾಣ ಕಾಮಗಾರಿ ಭೂಮಿಪೂಜೆ.
ನಗರದ ದುರ್ಗಮ್ಮ ದೇವಸ್ಥಾನದಿಂದ ವಯಾ ಎಸ್.ಎಲ್.ವಿ ನಸಿರ್ಂಗ್ ಹೋಂ ಮುಖಾಂತರ ಪೆÇೀಲೀಸ್ ಔಟ್ ಪೆÇೀಸ್ಟ್ ಸ್ಟೇಷನ್ವರೆಗೆ ರಸ್ತೆ ನಿರ್ಮಾಣ ಕಾಮಗಾರಿ, ಬಾಪೂಜಿ ನಗರ ಸರ್ಕಲ್ದಿಂದ ಆಂದ್ರಾಳ್ ಬ್ರಿಡ್ಜ್ವರೆಗೆ ರಸ್ತೆ ನಿರ್ಮಾಣ ವಯಾ ಗುಂತಕಲ್ ಗುಡಿಸಲು ಕಾಮಗಾರಿ(ಬಳ್ಳಾರಿ-ಕಲ್ಯಾಣದುರ್ಗ ಜಿಲ್ಲಾ ಮುಖ್ಯ ರಸ್ತೆಗೆ ಕೂಡು ರಸ್ತೆ), ನಗರದ ಸಾ ಮಿಲ್ ರಸ್ತೆಯಿಂದ ಮುಸ್ತಾಫ ನಗರವರೆಗೆ ರಸ್ತೆ ಅಭಿವೃದ್ಧಿ ಪಡಿಸುವುದು (ಬಳ್ಳಾರಿ-ಕಲ್ಯಾಣದುರ್ಗ ರಸ್ತೆಗೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಗೆ ಕೂಡು ರಸ್ತೆ), ನಗರದ ಎ.ಪಿ.ಎಂ.ಸಿ ಯಾರ್ಡ್ನಿಂದ ಆಂಧ್ರಾಳ್ ಸರ್ಕಲ್ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಗಾಂಧಿನಗರದ ಒಂದನೇ ಕ್ರಾಸ್ನಿಂದ ರಾಜ್ಯ ಹೆದ್ದಾರಿ-132ಕ್ಕೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ, ಮೋಕ ರಸ್ತೆಯಲ್ಲಿ ಬರುವ ನಕ್ಷತ್ರ ಹೋಟೆಲ್ನಿಂದ ಬಳ್ಳಾರಿ-ಕಪ್ಪಗಲ್ ಜಿಲ್ಲಾ ಮುಖ್ಯ ರಸ್ತೆಗೆ ಕೂಡುವ ರಸ್ತೆ ಅಭಿವೃದ್ಧಿ (ವಯಾ ಶಿವರಾಮರೆಡ್ಡಿ ಮನೆ) ಹಾಗೂ ರಾಜ್ಯ ಹೆದ್ದಾರಿ-132ಕ್ಕೆ ಕೂಡುವ ರಸ್ತೆ ಅಭಿವೃದ್ಧಿ (ವಯಾ ಕೃμÁ್ಣರೆಡ್ಡಿ ಮನೆ), ದೇವಿನಗರ ಮತ್ತು ಬಸವನಕುಂಟೆ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ನಗರದ ಬಳ್ಳಾರಿ-ಬಾದನಹಟ್ಟಿ ಜಿಲ್ಲಾ ಮುಖ್ಯ ರಸ್ತೆಯ ಕಿಮೀ.3ರಿಂದ ಭತ್ತಿ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಗೆ ಲಿಂಕ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ, ಕೆಕೆಆರ್ಡಿಬಿ (ಮೈಕ್ರೋ) ಯೋಜನೆಯ ಅಡಿಯಲ್ಲಿ ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 25 ಸಿದ್ಧಾರ್ಥ ನಗರದ ನಾಗಪ್ಪ ಮನೆಯಿಂದ ಪಂಪಣ್ಣ ಮನೆಯವರೆಗೆ ಮತ್ತು ಕವಿತಾ ಮನೆಯಿಂದ ಶ್ರೀಕಾಂತ ಮನೆಯವರೆಗೆ (ಜಗನ್ನಾಥ ಗುಡಿ ಮಾರ್ಗವಾಗಿ) ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ವಾರ್ಡ್ ಸಂಖ್ಯೆ 31 ಬಂಡಿಹಟ್ಟಿ ರಾಮನಗರದ ಹುಲುಗಣ್ಣ ಮನೆಯಿಂದ ತಿಪ್ಪೇಸ್ವಾಮಿ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಾಣ ಮತ್ತು ವಾರ್ಡ್ ಸಂಖ್ಯೆ 29 ಜಾಗೃತಿ ನಗರ ಈದ್ಗಾ ಮುಖ್ಯ ರಸ್ತೆಯಿಂದ ಲೋಟಸ್ ಕಾಲೋನಿಯವರೆಗೆ ಮತ್ತು ವಾರ್ಡ್ ನಂ. 34ರಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸೇರಿದಂತೆ ಸುಮಾರು ರೂ.663 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ನೆರವೇರಿಸಲಿದ್ದಾರೆ.
ಹಕ್ಕುಪತ್ರಗಳ ವಿತರಣೆ; ಬಳ್ಳಾರಿ ಉಪವಿಭಾಗ ವತಿಯಿಂದ ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ 52 ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ.