ಚಿಕ್ಕಮಗಳೂರು : ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಜೋರಾಗಿದೆ. ಕೂಲಿ ಕಾರ್ಮಿಕರು, ರೈತರು ಜಮೀನಿಗೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಕಾಡಾನೆ ಜನರ ನಿದ್ದೆಗೆಡಿಸಿದೆ. ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಕಾಡಾನೆಗಳು ಮನೆ ಬಾಗಿಲಿಗೆ ಬರುತ್ತಿವೆ.
ಕಳಸ ಹಲವು ಕಡೆ ಸುತ್ತಮುತ್ತಲಿನ ಗ್ರಾಮದ ಜನ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರೋದಕ್ಕೂ ಹೆದರುವ ಸ್ಥಿತಿ ಎದುರಾಗಿದೆ. ಕಳಸ ತಾಲೂಕಿನ ಗಣಪತಿಕಟ್ಟೆಯಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು , ಕಾಡಾನೆಗಳು ಸಂಚರಿಸುವುದನ್ನು ಸ್ಥಳೀಯರು ನೋಡಿದ್ದಾರೆ. ಕಾಡಾನೆ ಸೆರೆಹಿಡಿಯಲು ಗ್ರಾಮದ ಜನರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ರಸ್ತೆಬದಿ ಆಶ್ರಯ ಪಡೆದಿದ್ದವರ ಮೇಲೆ ಕಾಡಾನೆ ದಾಳಿಗೈದು, ದಂಪತಿ ಸೇರಿದಂತೆ ಮತ್ತೊರ್ವ ಸಾವಿನಿಂದ ಪಾರಾದ ಘಟನೆ ಬೆಳಕಿಗೆ ಬಂದಿತ್ತು. ಈ ಹಿಂದೆ ತರೀಕೆರೆ ತಾಲೂಕಿನಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ರೈತ ಸಾವನ್ನಪ್ಪಿ ದ್ದರು.
ಮೇಲಿಂದ ಮೇಲೆ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದರೂ ಆನೆ ಹಾವಳಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.ಕಾಡಾನೆಗಳ ಹಾವಳಿಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಕಾಡಾನೆಗಳ ದಾಳಿಯಿಂದ ಮನೆಯಿಂದ ಆಚೆ ಬರೋದಕ್ಕೆ ಭಯವಾಗುತ್ತಿದೆ . ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
‘ಗೌರಿಬಿದನೂರು ವೃತ್ತ’ದ ಪೊಲೀಸರ ಈ ನಡೆಗೆ ಭಾರೀ ಮೆಚ್ಚುಗೆ, ಪ್ರಶಂಸೆ: ಯಾಕೆ ಅಂತ ಈ ಸುದ್ದಿ ಓದಿ