ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿ ಬಂಧನಕ್ಕೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ .
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದಲ್ಲಿ ಕಾನೂನು ಇದೆ. ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಲಿಂಬಾವಳಿ ಹೆಸರು ಕೇಳಿಬಂದಿದೆ. ಸರ್ಕಾರ ಯಾರನ್ನೂ ಕೂಡ ರಕ್ಷಣೆ ಮಾಡಬಾರದು, ತಪ್ಪಿತಸ್ದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಡಿಕೆಶಿ ಒತ್ತಾಯಿಸಿದ್ದಾರೆ.
ನಗರದ ಮಹದೇವಪುರದ ಅಂಬಲಿಪುರದಲ್ಲಿರುವ ಪ್ರದೀಪ್ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಲಿಂಬಾವಳಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ
ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ತಾವು ನಂಬಿದ್ದ ಸ್ನೇಹಿತರಿಂದ ಹಣಕಾಸಿನ ವಿಚಾರದಲ್ಲಿ ಮೋಸಹೋಗಿ ಹಣಕಳೆದುಕೊಂಡು ಹತಾಷರಾಗಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಪ್ರದೀಪ್ ಅವರು ತಮ್ಮ ಡೆತ್ ನೋಟ್ ನಲ್ಲಿ ಮಾಜಿ ಶಾಸಕ ಮತ್ತು ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರನ್ನು ಕೂಡ ಪ್ರಸ್ತಾಪಿಸಿರುವುದರಿಂದ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಬೇಕು ಮತ್ತು ಪ್ರದೀಪ್ ಅವರ ಪತ್ನಿಗೆ ಹಣ ವಾಪಸ್ಸು ಕೊಡಿಸಬೇಕು ಎಂದು ಹೇಳಿದ್ದಾರೆ.
BIGG NEWS : ದೇಶದ ಜನತೆಗೆ ಗುಡ್ ನ್ಯೂಸ್ ; ‘ಆದಾಯ ತೆರಿಗೆ ವಿನಾಯಿತಿ ಮಿತಿ’ 5 ಲಕ್ಷಕ್ಕೆ ಹೆಚ್ಚಳ |Budget 2023
ಕುಮಾರಸ್ವಾಮಿ ಮತಿ ಭ್ರಮಣೆಯಾದವರಂತೆ ವರ್ತಿಸುತ್ತಿದ್ದಾರೆ : ಟ್ವೀಟ್ ನಲ್ಲಿ ಬಿಜೆಪಿ ಕಿಡಿ