ವಿಜಯನಗರ : ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಭರ್ಜರಿ ಸಿದ್ದತೆ ನಡೆಸಿದ್ದು, ಜನವರಿ ಅಂತ್ಯದ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯನಗರದ ಹಗರಿಬೊಮ್ಮನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಜನವರಿ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಹೇಳಿದರು. ಸಂಕ್ರಾಂತಿಗೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದ ಡಿಕೆಶಿಗೆ ಈ ಮೂಲಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಶ್ರೀ ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ
ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ದೊಡ್ಡಸರಳ ಸಂತವಾಗಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶ್ರೀಗಳು ತುಂಬಾ ಮಾನವೀಯತೆಯಿಂದ ಇದ್ದರು. ಶ್ರೀಗಳನ್ನು ನೋಡಿದವರಿಗೆ ಮಾತ್ರ ಅರಿವಾಗುತ್ತದೆ. ಬಸವಣ್ಣನವರ ತತ್ವವನ್ನು ಪ್ರೀತಿ, ವಿಶ್ವಾಸದಿಂದ ಹಂಚಿದ್ರು. ಶ್ರೀಗಳ ಅಗಲಿಕೆಯಿಂದ ನಾಡಿನ ಜನರಿಗೆ ನಷ್ಟ ಆಗಿದೆ. ಲಕ್ಷಾಂತರ ಭಕ್ತರು, ಅನುಯಾಯಿಗಳಿಗೆ ನೋವಾಗಿದೆ ಎಂದು ಸಿದ್ದರಾಮಯ್ಯ ಭಾವುಕಾಗಿದ್ದಾರೆ.
BREAKING NEWS: ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ: ಅಂತಿಮ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ
BIGG NEWS : ನಡೆದಾಡುವ ದೇವರು ‘ಸಿದ್ದೇಶ್ವರ ಶ್ರೀ’ ಅಂತ್ಯಕ್ರಿಯೆಗೆ 5 ಕ್ವಿಂಟಾಲ್ ಶ್ರೀಗಂಧ ಸಮರ್ಪಿಸಿದ ಭಕ್ತ
BIGG NEWS : ನಡೆದಾಡುವ ದೇವರು ‘ಸಿದ್ದೇಶ್ವರ ಶ್ರೀ’ ಅಂತ್ಯಕ್ರಿಯೆಗೆ 5 ಕ್ವಿಂಟಾಲ್ ಶ್ರೀಗಂಧ ಸಮರ್ಪಿಸಿದ ಭಕ್ತ