ನವದೆಹಲಿ : ಚಿತ್ರಮಂದಿರಗಳ ಮಾಲೀಕರಿಗೆ ಉತ್ತೇಜನ ನೀಡುವಂತೆ ಮಂಗಳವಾರ ಸುಪ್ರೀಂ ಕೋರ್ಟ್, ಚಿತ್ರಮಂದಿರಗಳು ಹಾಲ್ಗಳ ಒಳಗೆ ಆಹಾರ ಮತ್ತು ಪಾನೀಯಗಳ ಮಾರಾಟಕ್ಕೆ ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಲು ಸಂಪೂರ್ಣವಾಗಿ ಅರ್ಹವಾಗಿವೆ. ಆವರಣದೊಳಗೆ ಹೊರಗಿನ ಆಹಾರ ಪದಾರ್ಥಗಳನ್ನು ನಿಷೇಧಿಸುವ ಹಕ್ಕನ್ನು ಹೊಂದಿವೆ ಎಂದು ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಸಿನಿಮಾ ನೋಡುಗರು ಅದನ್ನು ಸೇವಿಸದಿರುವ ಆಯ್ಕೆಯನ್ನು ಹೊಂದಿರುತ್ತಾರೆ.ಆದರೆ, ಪೋಷಕರು ತಮ್ಮ ಶಿಶುಗಳಿಗೆ ಕೊಂಡೊಯ್ಯುವ ಆಹಾರವನ್ನು ಚಿತ್ರಮಂದಿರಗಳು ವಿರೋಧಿಸಬಾರದು ಎಂದು ಪೀಠವು ಪುನರುಚ್ಚರಿಸಿತು.
ಚಿತ್ರಮಂದಿರಗಳು ಖಾಸಗಿ ಆಸ್ತಿಗಳು, ಮಾಲೀಕರು ನಿಷೇಧದ ಹಕ್ಕುಗಳ ಬಗ್ಗೆ ನಿರ್ಧರಿಸಬಹುದು. ಒಬ್ಬರು ಚಿತ್ರಮಂದಿರದೊಳಗೆ ಜಿಲೇಬಿ (ಸಿಹಿ ಖಾದ್ಯ) ತೆಗೆದುಕೊಳ್ಳಲು ಬಯಸಿದರೆ, ಅದನ್ನು ಆಕ್ಷೇಪಿಸುವ ಹಕ್ಕು ಮಾಲೀಕರಿಗೆ ಇದೆ. ಜಿಲೇಬಿಯನ್ನು ತಿಂದ ನಂತರ, ವ್ಯಕ್ತಿಯು ಕುರ್ಚಿಯಿಂದ ತನ್ನ ಕೈಗಳನ್ನು ಒರೆಸಬಹುದು ಮತ್ತು ಅನಗತ್ಯವಾಗಿ ಅದನ್ನು ಹಾಳುಮಾಡಬಹುದು ಎಂದು ವಿಚಾರಣೆ ವೇಳೆ ವಕೀಲರು ವಾದಿಸಿದರು.
ಶುದ್ಧ ಕುಡಿಯುವ ನೀರು ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಶಿಶುಗಳಿಗೆ ಆಹಾರವನ್ನು ಸಹ ಅನುಮತಿಸಲಾಗಿದೆ, ಆದರೆ ಪ್ರತಿಯೊಂದು ಆಹಾರವನ್ನು ಆವರಣದೊಳಗೆ ಅನುಮತಿಸಲಾಗುವುದಿಲ್ಲ ಎಂದೇಳಿದರು.
ಮಲ್ಟಿಪ್ಲೆಕ್ಸ್ಗಳು ಮತ್ತು ಸಿನಿಮಾ ಚಿತ್ರಮಂದಿರಗಳು ಸಿನಿಮಾ ಪ್ರೇಕ್ಷಕರು ತಮ್ಮ ಸ್ವಂತ ಆಹಾರ ಮತ್ತು ಪಾನೀಯಗಳನ್ನು ಚಲನಚಿತ್ರ ಮಂದಿರಗಳಿಗೆ ಕೊಂಡೊಯ್ಯುವುದನ್ನು ತಡೆಯಬಾರದು ಎಂಬ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ನಿರ್ದೇಶನವನ್ನು ನ್ಯಾಯಾಲಯ ತಳ್ಳಿಹಾಕಿದೆ.
ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಇಂತಹ ಆದೇಶವನ್ನು ನೀಡುವಲ್ಲಿ ಉಚ್ಚ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ. ರಾಜ್ಯದ ನಿಯಮ ರೂಪಿಸುವ ಅಧಿಕಾರವು ಸಿನಿಮಾ ಮಂದಿರದ ಮಾಲೀಕರಿಗೆ ವ್ಯಾಪಾರ ವಹಿವಾಟು ನಡೆಸುವ ಮೂಲಭೂತ ಹಕ್ಕಿಗೆ ಅನುಗುಣವಾಗಿರಬೇಕು ಎಂಬುದಕ್ಕೆ ಯಾವುದೇ ಒತ್ತು ನೀಡಬೇಕಾಗಿಲ್ಲ ಎಂದೇಳಿದೆ.
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ 2018 ರ ತೀರ್ಪನ್ನು ಪ್ರಶ್ನಿಸಿ ಥಿಯೇಟರ್ ಮಾಲೀಕರು ಮತ್ತು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಲ್ಲಿಸಿದ ಮೇಲ್ಮನವಿಗಳ ಬ್ಯಾಚ್ ಅನ್ನು ನ್ಯಾಯಾಲಯವು ವಿಚಾರಣೆ ನಡೆಸಿತ್ತು.
ಚಿತ್ರಮಂದಿರಗಳ ಮಾಲೀಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ವಿ.ವಿಶ್ವನಾಥನ್, ಚಿತ್ರಮಂದಿರಗಳ ಆವರಣವು ಸಾರ್ವಜನಿಕ ಆಸ್ತಿಯಲ್ಲ, ಅಂತಹ ಹಾಲ್ಗಳ ಪ್ರವೇಶವನ್ನು ಚಿತ್ರಮಂದಿರಗಳ ಮಾಲೀಕರಿಗೆ ಕಾಯ್ದಿರಿಸಲಾಗಿದೆ ಎಂದೇಳಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಗಮನಕ್ಕೆ: ಜ.20ರವರೆಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ