ಶಿವಮೊಗ್ಗ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022-23ನೇ ಸಾಲಿಗೆ ಮೆಟ್ರಿಕ್ ಪೂರ್ವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1, ಅಲೆಮಾರಿ/ಅರೆಅಲೆಮಾರಿ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನ ಸೌಲಭ್ಯಕ್ಕಾಗಿ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜ 20ರವರೆಗೆ ವಿಸ್ತರಿಸಲಾಗಿದೆ.
ನಡು ರಸ್ತೆಯಲ್ಲೇ ರೋಮಿಯೋಗಳ ‘ರೊಮ್ಯಾನ್ಸ್’ : ಬೈಕ್ ಓಡಿಸುತ್ತಿದ್ದ ಪ್ರಿಯತಮೆಗೆ ಮುತ್ತಿನ ಸುರಿಮಳೆ..!
ಆಸಕ್ತರು ಇಲಾಖಾ ವೆಬ್ಸೈಟ್ https://ssp.karnataka.gov.in http://bcwd.karnataka.gov.in ರಲ್ಲಿ ಜ.20ರೊಳಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಹಾಗೂ ದೂ.ಸಂ.: 8050770005/ 08182-222129 ನ್ನು ಅಥವಾ ಇಮೇಲ್ – bcwdhelpline@gmail.com ನ್ನು ಸಂಪರ್ಕಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.