ಶಿವಮೊಗ್ಗ : ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-3 ರಲ್ಲಿ ಜ.06 ರಂದು ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಎಸ್.ವಿ.ಬಡಾವಣೆ ಡಿ ಬ್ಲಾಕ್, ವೃದ್ದಾಶ್ರಯ ಹತ್ತಿರ, ಪ್ಯಾನಿಶ್ ಅಡಿಕೆತಟ್ಟೆ ಫ್ಯಾಕ್ಟರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ( Power Cut ) ಎಂದು ಮೆಸ್ಕಾಂ ( MESCOM ) ಪ್ರಕಟಣೆ ತಿಳಿಸಿದೆ.
ರಾಜ್ಯ ಮಟ್ಟದ ತರಬೇತಿ ಶಿಬಿರ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿ.ಹಾಗೂ ಸಹಕಾರ ಇಲಾಖೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜ.07 ರಂದು ರಾಜ್ಯ ಮಟ್ಟದ ಒಂದು ದಿನದ ತರಬೇತಿ ಶಿಬಿರ ಏರ್ಪಡಿಸಲಾಗಿದೆ.
ದಿ ನೆಸ್ಟ್ ಹೋಂಸ್ಟೇ, ಶ್ರೀ ಲಕ್ಷ್ಮೀ ಫಾರಂ, ಬೇದನಬೈಲು, ನಿಜಗುರು, ಆರಗ ಅಂಚೆ, ತೀರ್ಥಹಳ್ಳಿ ತಾಲ್ಲೂಕು ಇಲ್ಲಿ ಶಿಬಿರ ಆಯೋಜಿಸಿದ್ದು ಜ.07 ರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ.
ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿ.ಬೆಂಗಳೂರು ನಿರ್ದೇಶಕ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಹೆಚ್.ಎನ್.ವಿಜಯದೇವ್, ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾ ಮಂಡಳ ನಿ. ಬೆಂಗಳೂರು ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಡಾ.ಬಿ.ಡಿ.ಭೂಕಾಂತ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ.ಬೆಂಗಳೂರು ನಿರ್ದೇಶಕರಾದ ಎ.ಸಿ.ನಾಗರಾಜ್, ಹೆಚ್.ಎನ್.ಅಶೋಕ, ಆರ್.ರಾಮಿರೆಡ್ಡಿ, ಕೆ.ಸಿ.ನಾಗರತ್ನ, ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಕೆ.ಎ.ತಾರಾನಾಥ, ಕೆ.ರತ್ನಾಕರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಎಸ್.ಅರಳಿ ಸೂರ್ಯಕಾಂತ್, ಕಾರ್ಯದರ್ಶಿ ಲಕ್ಷ್ಮೀಪತಯ್ಯ, ಸಹಕಾರ ಸಂಘಗಳ ಉಪನಿಬಂಧಕ ಜಿ.ವಾಸುದೇವ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ವಿ.ಮಹೇಶ್ವರಪ್ಪ, ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಬಸವರಾಜ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
BIGG NEWS: ಸಿದ್ದೇಶ್ವರ ಸ್ವಾಮೀಜಿ ತಂಗುತ್ತಿದ್ದ ತಪೋವನದಲ್ಲಿ ನಿರವಮೌನ
ನಡು ರಸ್ತೆಯಲ್ಲೇ ರೋಮಿಯೋಗಳ ‘ರೊಮ್ಯಾನ್ಸ್’ : ಬೈಕ್ ಓಡಿಸುತ್ತಿದ್ದ ಪ್ರಿಯತಮೆಗೆ ಮುತ್ತಿನ ಸುರಿಮಳೆ..!