ನವದೆಹಲಿ : ಆರ್ಥಿಕ ದುರುಪಯೋಗದ ಆರೋಪದ ಮೇಲೆ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವ್ರನ್ನ ಪದಚ್ಯುತಗೊಳಿಸಿದ ನಂತ್ರ ತೊಂದರೆಗೀಡಾದ ಫಿನ್ಟೆಕ್ ಕಂಪನಿಯ ಮೇಲ್ವಿಚಾರಣೆ ನಡೆಸುತ್ತಿರುವ ಭಾರತ್ ಪೇಯ ಮುಖ್ಯ ಕಾರ್ಯನಿರ್ವಾಹಕ ಸುಹೈಲ್ ಸಮೀರ್ ಕಂಪನಿಯಿಂದ ಹೊರ ಬಂದಿದ್ದಾರೆ.
“ಸಮೀರ್ ಎರಡು ವಾರಗಳ ಹಿಂದೆ ರಾಜೀನಾಮೆ ನೀಡಿದ್ದು, ನೋಟಿಸ್ ಅವಧಿಯಲ್ಲಿದ್ದಾರೆ” ಎಂದು ಅನಾಮಧೇಯತೆಯನ್ನ ವಿನಂತಿಸಿದ ಮೂಲಗಳಲ್ಲಿ ಒಬ್ಬರು ತಿಳಿಸಿದ್ದಾರೆ.
ಭಾರತ್ ಪೇ ವಕ್ತಾರರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಈ ಬೆಳವಣಿಗೆಯನ್ನ ದೃಢಪಡಿಸಿದ್ದಾರೆ. ಸಮೀರ್ ಜನವರಿ 7 ರಿಂದ ಕಂಪನಿಯ “ಕಾರ್ಯತಂತ್ರದ ಸಲಹೆಗಾರ” ಆಗಿ ಬದಲಾಗಲಿದ್ದಾರೆ ಎಂದು ಅವರು ಹೇಳಿದರು. ಭಾರತ್ ಪೇಯ ಸಿಎಫ್ಒ ನಳಿನ್ ನೇಗಿ ಅವರನ್ನ ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದ್ದು, ಸಮೀರ್ ಅವರ ಸ್ಥಾನಕ್ಕೆ ಕಂಪನಿಯ ಆಡಳಿತ ಮಂಡಳಿ ಶೋಧ ನಡೆಸುತ್ತಿದೆ ಎಂದಿದೆ.
ಭಾರತ ವೈಜ್ಞಾನಿಕ ದೃಷ್ಟಿಕೋನದಿಂದ ಬೆಳೆಯುತ್ತಿದೆ, ಜಗತ್ತು ನಮ್ಮತ್ತ ನೋಡುತ್ತಿದೆ ; ಪ್ರಧಾನಿ ಮೋದಿ
BREAKING NEWS : ನಾಳೆಯವರೆಗೂ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ : ವಿಜಯಪುರ ಡಿ.ಸಿ ಮಹಾಂತೇಶ್