ವಿಜಯಪುರ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ.ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಲಕ್ಷಾಂತರ ಜನರು ಬಂದು ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕೆ ವ್ಯಕ್ತಿಯೊಬ್ಬರು ತಮ್ಮ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ಬಂದಿದ್ದಾರೆ. ಈ ಮೂಲಕ ವೃದ್ಧೆಗೆ ಶ್ರೀಗಳ ಅಂತಿಮ ದರ್ಶನ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ.
ವಿಜಯಪುರದ ನಾಗಠಾಣ ಗ್ರಾಮದ ಓಂಶಾಂತಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಪರದಾಟ ನಡೆಸುತ್ತಿದ್ದರು. ಬಬಲೇಶ್ವರ ಗ್ರಾಮದ ಶಿವಾನಂದ ಅವರು ಅಜ್ಜಿಯ ಪರದಾಟ ನೋಡಿ ಭುಜದ ಮೇಲೆ ಹೊತ್ತು ತಂದಿದ್ದಾರೆ.ಶ್ರೀಗಳ ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರ ಆಗಮಿಸಿದ್ದಾರೆ. ಪ್ರತಿ ಮೂಲೆ ಮೂಲೆ, ಹಳ್ಳಿಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಇನ್ನು ಅಪಾರ ಸಂಖ್ಯೆ ಜನರು ಬರುವ ಸಾಧ್ಯತೆ ಇದೆ. ಇನ್ನು ಇಂದು ಸಂಜೆ 5 ಗಂಟೆಗೆ ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಲಿದೆ.
BIGG NEWS: ʼಸಿದ್ದೇಶ್ವರ ಸ್ವಾಮೀಜಿ ದೊಡ್ಡ ಸರಳ ಸಂತʼ; ಶ್ರೀಗಳು ತುಂಬಾ ಮಾನವೀಯತೆಯಿಂದ ಇದ್ರು: ಸಿದ್ದರಾಮಯ್ಯ